Home ಧಾರ್ಮಿಕ ಸುದ್ದಿ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೇಲ್ಛಾವಣಿ ಸಮರ್ಪಣೆ

ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೇಲ್ಛಾವಣಿ ಸಮರ್ಪಣೆ

1261
0
SHARE

ಉಡುಪಿ : ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ಮೇಲ್ಛಾವಣಿಯ ಸಮರ್ಪಣಾ ಕಾರ್ಯಕ್ರಮವು ಫೆ. 13ರಂದು ನಡೆಯಿತು. ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ದೇಗುಲದ ಮೇಲ್ಛಾವಣೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಮಾಧವ ಬನ್ನಂಜೆ, ಮೊಕ್ತೇಸರರಾದ ಪ್ರಭಾಕರ ಶೆಟ್ಟಿ, ಸುದೇಶ್‌ ಶೇಟ್‌, ಸತೀಶ್‌ ಭಂಡಾರಿ, ದಿನೇಶ್‌ ಪುತ್ರನ್‌, ವಿದ್ಯಾಲತಾ ಶೆಟ್ಟಿ, ನಿತ್ಯಾನಂದ ಬನ್ನಂಜೆ, ಅರುಂಧತಿ ಎಸ್‌. ಶೆಟ್ಟಿ, ಪಿ. ವಾಸುದೇವ ಉಪಾಧ್ಯ, ವಾಸುದೇವ ಶೆಟ್ಟಿಗಾರ್‌, ಸಂಕ್ರಾಯ ಆಚಾರ್ಯ, ರವಿರಾಜ್‌ ಭಟ್‌, ರಮೇಶ್‌ ಪೈ, ಪ್ರಧಾನ ತಂತ್ರಿ, ಭಜನಾ ಮಂದಿರದ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.

ದೇವಸ್ಥಾನದಲ್ಲಿ ಬೆಳಗ್ಗಿನಿಂದ ಧಾರ್ಮಿಕ ವಿಧಿ ವಿಧಾನಗಳು ಜರಗಿತು. ರಾತ್ರಿ ಉತ್ಸವ ಬಲಿ, ರಥೋತ್ಸವ ನಡೆದು ಬಳಿಕ ಮಹಾರಂಗಪೂಜೆ, ಭೂತಬಲಿ, ನಂದಿಕೋಣ, ರಕ್ತೇಶ್ವರಿ, ಬೊಬ್ಬರ್ಯ ದೈವ, ಕ್ಷೇತ್ರಪಾಲ ಪೂಜೆ ನಡೆಯಿತು.

ಫೆ. 14ರಂದು ಬೆಳಗ್ಗೆ ತುಲಾಭಾರ ಸೇವೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ಆಶೀರ್ವಚನವನ್ನು ನೀಡಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು ಪ್ರಮುಖ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಆಡಳಿತ ಮೊಕ್ತೇಸರ ಮಾಧವ ಬನ್ನಂಜೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here