ಕೋಟ: ಶ್ರೀ ನಾಗದೇವರು ಮತ್ತು ಶಿವಶೆಟ್ಟಿ ಚಿತ್ತಾರಿ, ನಂದಿಕೇಶ್ವರ ಪರಿವಾರ ದೈವಸ್ಥಾನ ಕೊತ್ತಾಡಿ-ಬನ್ನಾಡಿ ಇಲ್ಲಿನ ಜೀರ್ಣೋದ್ಧಾರ, ಪುನಃ ಪ್ರತಿಷ್ಠೆ ಮೇ 6ರಿಂದ ನಡೆಯಲಿದೆ.
ಈ ಪ್ರಯುಕ್ತ ಮೇ 6ರಂದು ಸಂಜೆ 6ಕ್ಕೆ ನಾಗದೇವರ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ, ಹೋಮ ಹವನ ಮುಂತಾದವುಗಳು ನಡೆಯಲಿದೆ. ಮೇ 7ರ ಬೆಳಗ್ಗೆ ನಾಗದೇವರ ಪುನಃ ಪ್ರತಿಷ್ಠೆ, ಕಲಾ ತತ್ವ ಹೋಮ, ಮಹಾಪೂಜೆ, ಆಶ್ಲೇಷ ಬಲಿ ನಡೆಯಲಿದೆ.
ಮೇ 8ರಂದು ಬೆಳಗ್ಗೆ ಬ್ರಹ್ಮಕಲಶೋತ್ಸವ ಸ್ಥಾಪನೆ, ನಾಗ ಸಂದರ್ಶನ, ಮಹಾಪೂಜೆ, ಸಂಜೆ 6ಗಂಟೆಗೆ ಶಿವಶೆಟ್ಟಿ ಚಿತ್ತಾರಿ ನಂದಿಕೇಶ್ವರ ಹಾಗೂ ಪರಿವಾರ ದೈವದ ಸನ್ನಿಧಿಯಲ್ಲಿ ವಿವಿಧ ಪೂಜೆ-ಪುನಸ್ಕಾರಗಳೊಂದಿಗೆ ಪುನಃ ಪ್ರತಿಷ್ಠೆ, ಶಿಖರ ಪ್ರತಿಷ್ಠೆ ಮುಂತಾದವುಗಳು ನಡೆಯಲಿವೆ. ಮೇ 9ರಂದು ಬೆಳಗ್ಗೆ ಕಲಾತತ್ವ, ಬ್ರಹ್ಮಕಲಶಾಭಿಷೇಕ, ಅಪರಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮ
ಮೇ 9ರಂದು ಬೆಳಗ್ಗೆ 10.30ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮಿಗಳು ಆಶೀವರ್ಚನ ನೀಡಲಿದ್ದಾರೆ. ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ರಾಜರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ವಿದ್ವಾನ್ ಕೆ. ಶ್ರೀಪತಿ ಉಪಾಧ್ಯ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಮೇ 10ಕ್ಕೆ ಢಕ್ಕೆ ಬಲಿ, ತುಲಾಭಾರ ಸೇವೆ ನಡೆಯಲಿದೆ ಸಂಘಟನೆಯ ಮುಖ್ಯಸ್ಥರು ತಿಳಿಸಿದ್ದಾರೆ.