Home ಧಾರ್ಮಿಕ ಸುದ್ದಿ ಬಳಂಜ ಪಂಚಲಿಂಗೇಶರ-ದುರ್ಗಾಪರಮೇಶ್ವರೀ ಕ್ವೇತ್ರದ ಜಾತ್ರೆ

ಬಳಂಜ ಪಂಚಲಿಂಗೇಶರ-ದುರ್ಗಾಪರಮೇಶ್ವರೀ ಕ್ವೇತ್ರದ ಜಾತ್ರೆ

536
0
SHARE

ಬೆಳ್ತಂಗಡಿ: ಬಳಂಜ ಶ್ರೀ ಪಂಚಲಿಂಗೇಶ್ವರ – ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಎ. 6ರಿಂದ ಜಾತ್ರೆ ಪ್ರಾರಂಭವಾಗಿದ್ದು ಶುಕ್ರವಾರ ದೇವರ ಬಲಿ ಉತ್ಸವ ನಡೆಯಿತು. ಬೆಳಿಗ್ಗೆ 9ರಿಂದ ಸ್ವಸ್ತಿ ಪುಣ್ಯಾಹವಾಚನ, ಕಲಶಾರಾಧನೆ, ಕವಾಟೋದ್ಘಾಟನೆ, ದಿವ್ಯ ದರ್ಶನ ದಶವಿಧ ಸ್ನಾನ, ಪಂಚಾಮೃತಾಭಿಷೇಕ, ಕಲಶಾಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ, ಚೂರ್ಣೋತ್ಸವ, ಪಲ್ಲಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಸಂಜೆ ಬಳಂಜ ಗುತ್ತುವಿನಿಂದ ದೈವಗಳ ಭಂಡಾರ ಬಂದು, ರಾತ್ರಿ 9ರಿಂದ ಉತ್ಸವ ಬಲಿ ನಡೆಯಿತು. ವಸಂತಕಟ್ಟೆ ಪೂಜೆ, ಶ್ರೀ ಕೊಡಮಣಿತ್ತಾಯ ದೈವದ ನೇಮ, ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ದುರ್ಗಾಪರಮೇಶ್ವರೀ ದೇವರ ಮನ್ಮ ರಥೋತ್ಸವ, ದೈವ ಮತ್ತು ದೇವರ ಭೇಟಿ, ಶ್ರೀ ದೇವರ ಅವಭೃಥ, ಧ್ವಜಾವರೋಹಣ, ಮಹಾಪೂಜೆ ನಡೆಯಿತು.

ಉತ್ಸವ ಸಮಿತಿ ಅಧ್ಯಕ್ಷ ಅಶ್ವತ್ಥ್ ಹೆಗ್ಡೆ ಕುಳೆಂಜಿರೋಡಿಗುತ್ತು, ಆನುವಂಶೀಯ ಆಡಳಿತ ಮೊಕ್ತೇಸರರಾದ ಬಿ. ಶೀತಲ್‌ ಪಡಿವಾಳ್‌ ಬಳಂಜಗುತ್ತು, ಶಂಕರ ನಾರಾಯಣ ಭಟ್‌ ಪವಿತ್ರಪಾಣಿ, ದುರ್ಗಾ ಪರಮೇಶ್ವರೀ ಕ್ಷೇತ್ರ ಬಳಂಜದ ಅರ್ಚಕ ರಾದ ಸುಬ್ರಹ್ಮಣ್ಯ ಭಟ್‌, ಮಂಜುನಾಥ್‌ ಭಟ್‌, ಪಂಚಲಿಂಗೇಶ್ವರ ಭಜನ ಮಂಡಳಿ ಅಧ್ಯಕ್ಷ ರತ್ನಾಕರ ಶೆಟ್ಟಿ ತಾರಿದೊಟ್ಟು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್‌ ರೈ ಬಾರªಡ್ಕ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಮೋದ್‌ ಕುಮಾರ್‌ ಜೈನ್‌, ಹೊಸ ಮನೆ, ಚಂದ್ರಶೇಖರ ಪಿ.ಕೆ., ಸುರೇಶ್‌ ಶೆಟ್ಟಿ ಕುರೇಲ್ಯ, ಗುರುಪ್ರಸಾದ್‌ ದರಿಮಾರ್‌,

ಪ್ರವೀಣ್‌ ಕುಮಾರ್‌ ಎಚ್‌.ಎಸ್‌. ನಾಲ್ಕೂರು, ವಿಶ್ವನಾಥ ಹೊಳ್ಳ, ಮಜ್ಜೆನಿಬೈಲು, ಸತೀಶ್‌ ಕೆ. ಬರಮೇಲು, ಆನಂದ ದೇವಾಡಿಗ ಶಾರಬೈಲು, ನಿತ್ಯಾನಂದ ಹೆಗ್ಡೆ ಬಳಂಜ, ರಮೇಶ್‌ ಆಚಾರ್ಯ ಹೇರ, ರಮಾನಾಥ ಶೆಟ್ಟಿ ಪಂಬಾಜೆ, ಕೃಷ್ಣಪ್ಪ ಪೂಜಾರಿ ಬೊಂಟ್ರೊಟ್ಟು ಭಕ್ತರು ಉಪಸ್ಥಿತರಿದ್ದರು.

ಇಂದು ನೇಮ ಎ. 13ರಂದು ಬೆಳಗ್ಗೆ ಸ್ವಸ್ತಿ ಪುಣ್ಯಾಹವಾಚನ, ನವಕ ಕಲಶ ಆರಾಧನೆ, ಪ್ರಧಾನ ಹೋಮ, ಪಂಚಾಮೃತಾಭಿಷೇಕ, ಕಲಶ ಅಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ, ಮಹಾಮಂತ್ರಾಕ್ಷತೆ, ರಾತ್ರಿ 8ರಿಂದ ಹಂದ್ಲಾಯಿ ದೈವಸ್ಥಾನದಲ್ಲಿ ಶ್ರೀ ಕೊಡಮಣಿತ್ತಾಯ ದೈವದ ನೇಮ ನಡೆಯಲಿದೆ.

LEAVE A REPLY

Please enter your comment!
Please enter your name here