Home ಧಾರ್ಮಿಕ ಸುದ್ದಿ ಬಂಗ್ಲೆಗುಡ್ಡೆ : ನಾಗಬ್ರಹ್ಮ ಆದಿ ಮೊಗೇರ್ಕಳ, ಕೊರಗತನಿಯ ದೈವಗಳ ನೇಮ

ಬಂಗ್ಲೆಗುಡ್ಡೆ : ನಾಗಬ್ರಹ್ಮ ಆದಿ ಮೊಗೇರ್ಕಳ, ಕೊರಗತನಿಯ ದೈವಗಳ ನೇಮ

503
0
SHARE

ಸುಳ್ಯ : ಸುಳ್ಯ ಬಂಗ್ಲೆಗುಡ್ಡೆ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ಸೇವಾ ಸಮಿತಿ ವತಿಯಿಂದ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಗಳ ಮತ್ತು ಕೊರಗತನಿಯ ದೈವದ 29ನೇ ವರ್ಷದ ನೇಮ ನಡೆಯಿತು.

ಶ್ರೀ ದೈವಸ್ಥಾನದ ಸ್ಥಳ ಶುದ್ದಿ ಹಾಗೂ ಗಣಹೋಮ, ಸಂಜೆ ಶ್ರೀ ದೈವಗಳ ಭಂಡಾರ ತೆಗೆಯಲಾಯಿತು. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆ ಯಿತು. ಅನಂತರ ಮೊಗೇರ್ಕಳ ದೈವಗಳು ಗರಡಿ ಇಳಿದು, ಎಂ.ಕೆ.ಗೌಡ ನಿಲಯದಿಂದ ತನ್ನಿಮಾನಿಗ ಗರಡಿಗೆ ಬರಲಾಯಿತು.

ಮರುದಿನ ಬೆಳಗ್ಗೆ ಶ್ರೀ ಕೊರಗತನಿಯ ನೇಮ, ಅನಂತರ ಬಳಿಕ ಪ್ರಸಾದ ವಿತರಣೆ ನಡೆಯಿತು. ದೈವಸ್ಥಾನದ ಪದಾಧಿಕಾರಿಗಳು, ಭಕ್ತರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here