ಕಡಬ: ಪುನರ್ನಿರ್ಮಾಣಗೊಂಡಿರುವ ಕೊಂಬಾರು ಗ್ರಾಮದ ಬನಾರಿ ಶ್ರೀ ಮತ್ತುಮಾರಿಯಮ್ಮ ದೇವಸ್ಥಾನದಲ್ಲಿ ಶ್ರೀ ದೇವಿಯ ಪ್ರತಿಷ್ಠಾ ಕಲಶಾಭಿಷೇಕವು ಗುರುವಾರ ಜರಗಿತು.
ಕೊಂಬಾರು ಬನಾರಿ ಪರಿಸರದ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ರಬ್ಬರ್ ವಿಭಾಗದ ಕಾರ್ಮಿಕರು ಹಾಗೂ ತಮಿಳು ಕಾಲನಿಯ ನಿವಾಸಿಗಳು ಸೇರಿದಂತೆ ಸ್ಥಳೀಯ ಜನರು ಕಳೆದ 45 ವರ್ಷಗಳಿಂದ ಆರಾಧಿಸಿಕೊಂಡು ಬರುತ್ತಿರುವ ಕಾನನದ ನಡುವೆ ಇರುವ ಶ್ರೀ ಮುತ್ತು ಮಾರಿಯಮ್ಮ ದೇವಿಯ ಸಾನಿಧ್ಯವು ಶಿಥಿಲಾವಸ್ಥೆಗೆ ತಲುಪಿದ್ದ ಹಿನ್ನೆಲೆಯಲ್ಲಿ ಊರ ಪ್ರಮುಖರು ಸೇರಿಕೊಂಡು ಸುಮಾರು 6 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ನೆರವೇರಿಸಿದ್ದು, ಬುಧವಾರ ರಾತ್ರಿಯಿಂದ ವೇ|ಮೂ| ಪ್ರಸಾದ ಕೆದಿಲಾಯ ಬಿನ್ನಾಜೆ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದು ಗುರುವಾರ ಬೆಳಗ್ಗೆ ಪ್ರತಿಷ್ಠಾ ಕಲಶಾಭಿಷೇಕ ಜರಗಿತು.
ಪ್ರತಿಷ್ಠಾ ಕಲಶಾಭಿಷೇಕ ಸಮಿತಿಯ ಗೌರವಾಧ್ಯಕ್ಷ ಮುತ್ತುಕುಮಾರ್, ಅಧ್ಯಕ್ಷ ಗಣಪತಿ ಆರ್. ಕಾರ್ಯದರ್ಶಿ ಹರೀಶ್ ಬೆದ್ರಾಜೆ, ಉಪಾಧ್ಯಕ್ಷ ಶಿವ ಮಂಡೆಕರ, ಕೋಶಾಧಿಕಾರಿ ತಂಗರಾಜ್, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಸದಸ್ಯೆ ಪುಲಸ್ತ್ಯಾ ರೈ, ಕಡಬ ಶ್ರೀಕಂಠ ಸ್ವಾಮಿ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ನಾರಾಯಣ ಗೌಡ ಅಲುಂಗೂರು, ಸದಸ್ಯ ಮೋಹನದಾಸ ಮೂರಾಜೆ, ಜಾತ್ರೆ ಸಮಿತಿಯ ಅಧ್ಯಕ್ಷ ಸತೀಶ್ ನಾೖಕ್ ಮೇಲಿನಮನೆ, ಕೊಂಬಾರು ಬೋಳ್ನಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಚಿದಾನಂದ ಗೌಡ ಗುತ್ತುಮನೆ, ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ, ಕಡಬ ಏಕಾಹ ಭಜನ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಕರ್ಕೇರ, ಕೆಎಫ್ಡಿಸಿ ರಬ್ಬರ್ ತೋಟಗಳ ಅಧೀಕ್ಷಕ ಮಣಿ, ಪ್ರಮುಖರಾದ ಸುರೇಶ್ ಕೋಟೆಗುಡ್ಡೆ, ಜಯರಾಮ ಗೌಡ ಆರ್ತಿಲ, ಮಂಜುನಾಥ ಶೆಟ್ಟಿ, ಸೀತಾರಾಮ ಗೌಡ ಕೆ., ಸಂತೋಷ್ ಸುವರ್ಣ, ಮಾಯಿಲಪ್ಪ ಗೌಡ ಕೊಂಬಾರುಗದ್ದೆ, ವನಪುಷ್ಪ ಮುತ್ತುಕುಮಾರ್, ವೇಲಾಯುಧನ್ ಕೋಲಂತಾಡಿ, ತಿಲಕ್ರಾಜ್ ನಾರಡ್ಕ, ರವೀಂದ್ರನ್ ಕೊಂಬಾರು, ಬಾಬು ಗೌಡ, ಶಿವಪ್ರಸಾದ್ ಕಾಯರ್ತಡ್ಕ ಉಪಸ್ಥಿತರಿದ್ದರು.
ಕೊಂಬಾರು ಶ್ರೀ ದುರ್ಗಾಪರಮೇಶ್ವರಿ ಭಜನ ಮಂಡಳಿ, ಶ್ರೀ ಷಣ್ಮುಖ ಯುವಕ ಮಂಡಲದ ಸದಸ್ಯರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು.