Home ಧಾರ್ಮಿಕ ಸುದ್ದಿ ಬಲ್ಯ ಶ್ರೀ ಉಮಾಮಹೇಶ್ವರೀ ದೇವಸ್ಥಾನ: ವಾರ್ಷಿಕ ಜಾತ್ರೆ

ಬಲ್ಯ ಶ್ರೀ ಉಮಾಮಹೇಶ್ವರೀ ದೇವಸ್ಥಾನ: ವಾರ್ಷಿಕ ಜಾತ್ರೆ

122
0
SHARE

ಕಡಬ: ಬಲ್ಯ ಶ್ರೀ ಉಮಾಮಹೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆ ಶನಿವಾರ ಮತ್ತು ರವಿವಾರ ಜರಗಿತು. ದೇವಸ್ಥಾನಕ್ಕೆ ಶನಿವಾರ ಬೆಳಗ್ಗೆ ಗ್ರಾಮಸ್ಥರಿಂದ ಹೊರೆ ಕಾಣಿಕೆ ಸಮರ್ಪಣೆ ನಡೆಯಿತು. ಸಂಜೆ ಗ್ರಾಮಸ್ಥರಿಂದ ಕಾಣಿಕೆ ಹುಂಡಿ ಸಮರ್ಪಣೆ, ಬಳಿಕ ಶ್ರೀ ಉಮಾಮಹೇಶ್ವರೀ ಭಜನ ಮಂಡಳಿಯ ಸದಸ್ಯರಿಂದ ಭಜನ ಕಾರ್ಯಕ್ರಮ ನಡೆಯಿತು. ರಾತ್ರಿ ಪ್ರಾರ್ಥನೆ, ಪುಣ್ಯಾಹ, ಪ್ರಾಸಾದ ಶುದ್ಧಿ, ವಾಸ್ತು ರಕ್ಷೋಘ್ನ ಹೋಮ, ವಾಸ್ತು ಬಲಿ, ವಾಸ್ತು ಪೂಜೆ ನಡೆದು ಮಹಾಪೂಜೆ ನೆರವೇರಿತು.

ರವಿವಾರ ಬೆಳಗ್ಗೆ ಗಣಪತಿ ಹೋಮ, ಬಿಂಬ ಶುದ್ಧಿ, ಸಾನ್ನಿಧ್ಯ, ಕಲಶಪೂಜೆ, ಪಂಚಾಮೃತಾಭಿಷೇಕ, ಸಾನ್ನಿಧ್ಯ ಕಲಶಾಭಿಷೇಕ ನಡೆದು ಬಳಿಕ ನಾಗದೇವರು ಹಾಗೂ ಪರಿವಾರ ದೈವಗಳ ವರ್ಷಾವಧಿ ತಂಬಿಲ ನಡೆಯಿತು. ಮಧ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಿಸಲಾಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಬಳಿಕ ಚೆಂಡೆವಾದನ, ದೀಪಾರಾಧನೆ, ದೇವಿಗೆ ವಿಶೇಷ ಮಹಾಪೂಜೆ, ರಾತ್ರಿ ಶ್ರೀ ಭೂತ ಬಲಿ, ನೃತ್ಯ ಬಲಿ ಉತ್ಸವ, ರಾಜಾಂಗಣ ಪ್ರಸಾದ, ಬಟ್ಟಲು ಕಾಣಿಕೆ, ಮಂತ್ರಾಕ್ಷತೆ ನಡೆಯಿತು.

ಬಲ್ಯ ಶ್ರೀ ಉಮಾಮಹೇಶ್ವರಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ. ಚಿತ್ತರಂಜನ್‌ ರೈ ಮಾಣಿಗ, ಕಾರ್ಯದರ್ಶಿ ನಾರಾಯಣ ಗೌಡ ಕೊಲ್ಲಿಮಾರ್‌, ಧಾರ್ಮಿಕ ಉತ್ಸವ ಸಮಿತಿಯ ಅಧ್ಯಕ್ಷ ಜಗನ್ನಾಥ ಶೆಟ್ಟಿ ಗುಂಡಿಜಾಲು, ಭಜನ ಮಂಡಳಿಯ ಅಧ್ಯಕ್ಷ ಶಶಿಧರ ಗೌಡ ಕೆರೆನಡ್ಕ, ಕೋಶಾಧಿಕಾರಿ ಭಾಸ್ಕರ ಸನಿಲ, ಉಪಾಧ್ಯಕ್ಷರಾದ ಉಷಾ ಪೂರ್ಣೇಶ್‌ ಬಿ.ಎಂ., ವಿಜಯ ಕುಮಾರ್‌ ಪುತ್ತಿಲ, ಡಾ| ಸುರೇಶ್‌ ಕುಮಾರ್‌ ಕೂಡೂರು, ಸೇವಾ ಟ್ರಸ್ಟ್‌ನ ಜತೆ ಕಾರ್ಯದರ್ಶಿ ಮೋಹನ್‌ ಡಿ.ಬಿ., ಕೋಶಾಧಿಕಾರಿ ರಾಜರಾಮ್‌ ಭಟ್ ಹೊಸ್ಮಠ, ಸದಸ್ಯರಾದ ತನಿಯ ಸಂಪಡ್ಕ, ತಿಮ್ಮಪ್ಪ ಕರ್ಕೇರ ಮತ್ರಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here