Home ಧಾರ್ಮಿಕ ಸುದ್ದಿ ಬಳ್ಪ ತ್ರಿಶೂಲಿನೀ ರಥೋತ್ಸವ

ಬಳ್ಪ ತ್ರಿಶೂಲಿನೀ ರಥೋತ್ಸವ

777
0
SHARE

ಸುಬ್ರಹ್ಮಣ್ಯ : ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಂಗಳವಾರ ರಾತ್ರಿ ಬ್ರಹ್ಮರಥೋತ್ಸವ ನಡೆಯಿತು. ಸಂಪೂರ್ಣ ಶಿಲಾಮಯವಾಗಿರುವ
ದೇವಸ್ಥಾನ ಜೀರ್ಣೋದ್ಧಾರಗೊಂಡ ಬಳಿಕ ಪ್ರಥಮ ವಾರ್ಷಿಕೋತ್ಸವ ಹಾಗೂ ಬ್ರಹ್ಮರಥೋತ್ಸವ ಬ್ರಹ್ಮಶ್ರೀ ಪಾವಂಜೆ ವಾಗೀಶ ಶಾಸ್ತ್ರೀ ಅವರ ನೇತೃತ್ವದಲ್ಲಿ ನಡೆಯಿತು.

ಮಂಗಳವಾರ ಬೆಳಗ್ಗೆ ತ್ರಿಶೂಲಿನಿ ಅಮ್ಮನವರು ರಥಾರೂಢರಾದ ಬಳಿಕ ರಾತ್ರಿ ಬ್ರಹ್ಮ ರಥೋತ್ಸವ ಹಾಗೂ ಸುಡುಮದ್ದು ಪ್ರದರ್ಶನ ನಡೆಯಿತು. ಸಾವಿರಾರು ಭಕ್ತರು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು. ಬುಧವಾರ ಬೆಳಗ್ಗೆ ದರ್ಶನ ಬಲಿ ಹಾಗೂ ಸಂಜೆ ಅವಭೃಥೋತ್ಸವ ನಡೆಯಿತು.

LEAVE A REPLY

Please enter your comment!
Please enter your name here