Home ಧಾರ್ಮಿಕ ಸುದ್ದಿ ಬಳ್ಪ : ತ್ರಿಶೂಲಿನೀ ದೇವಿಯ ಶ್ರದ್ಧಾ ಭಕ್ತಿಯ ಅವಭೃಥೋತ್ಸವ

ಬಳ್ಪ : ತ್ರಿಶೂಲಿನೀ ದೇವಿಯ ಶ್ರದ್ಧಾ ಭಕ್ತಿಯ ಅವಭೃಥೋತ್ಸವ

495
0
SHARE

ಸುಬ್ರಹ್ಮಣ್ಯ : ಬಳ್ಪ ಶಿಲಾಮಯ ತ್ರಿಶೂಲಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ತ್ರಿಶೂಲಿನಿ ದುರ್ಗಾ ಪರಮೇಶ್ವರಿ ದೇವಿಯ ಅವಭೃಥೋತ್ಸವವು ಭಕ್ತಿ ಸಡಗರದಿಂದ ನಡೆಯಿತು. ಶ್ರೀ ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಪಾವಂಜೆ ವಾಗೀಶ ಶಾಸ್ತ್ರೀಗಳ ನೇತೃತ್ವದಲ್ಲಿ ಅವಭೃಥೋತ್ಸವದ ವೈಧಿಕ ವಿಧಿವಿಧಾನಗಳು ನೆರವೇರಿತು.

ಪ್ರಾತಃಕಾಲ ಸೂರ್ಯೋದಯದ ಸಮಯದಲ್ಲಿ ಕವಾಟೋದ್ಘಾಟನೆ ನೆರವೇರಿತು. ಬಳಿಕ ಶ್ರೀ ದೇವಿಯ ಉತ್ಸವ ಬಲಿ ನಡೆಯಿತು. ತದನಂತರ ದರ್ಶನ ಬಲಿ ನೆರವೇರಿತು. ಸಂಜೆ ಶ್ರೀ ದೇವರ ಅವಭೃತ ಸವಾರಿ ಆರಂಭವಾಯಿತು. ಸವಾರಿಯ ನಡುವೆ ಕಾಂಜಿ, ಬೀದಿಗುಡ್ಡೆ, ದೊಡ್ಡಮನೆ, ಕೊಠಾರಿ ಮತ್ತು ಕಲ್ಲುಂಗುಡಿ ಮೊದಲಾದೆಡೆ ಸುಮಾರು 9 ಕಟ್ಟೆಪೂಜೆಗಳನ್ನು ದೇವಿಯು ಸ್ವೀಕರಿಸಿದರು. ಬಳಿಕ ಶ್ರೀ ದೇವಿಯು ಅರ್ಗುಡಿಯಲ್ಲಿನ ಕುಮಾರಧಾರ ನದಿಯ ಜಳಕದ ಗುಂಡಿಯಲ್ಲಿ ಶ್ರೀ ದೇವಿಯ ಅವಭೃಥೋತ್ಸವ ನಡೆಯಿತು. ಬಳಿಕ ಅರ್ಗುಡಿಯಲ್ಲಿನ ಕಟ್ಟೆಯಲ್ಲಿ ಕಟ್ಟೆಪೂಜೆ ನೆರವೇರಿತು. ಅನಂತರ ಶ್ರೀ ದೇವಿಯು ದೇವಸ್ಥಾನಕ್ಕೆ ತೆರಳಿದರು. ಧ್ವಜಾವರೋಹಣ, ಸಂಪ್ರೋಕ್ಷಣ, ಮಂತ್ರಾಕ್ಷತೆ ನೆರವೇರಿತು.

ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀವತ್ಸ ಎಂ.ವಿ., ಡಾ| ಮಂಜುನಾಥ ಎಂ.ವಿ., ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಲಿಂಗಪ್ಪ ಗೌಡ ಕಟ್ಟ, ಅಧ್ಯಕ್ಷ ಸದಾನಂದ ರೈ ಅರ್ಗುಡಿ, ಕೋಶಾಧಿಕಾರಿ ಮುರಳಿ ಕಾಮತ್‌ ಬಳ್ಪ, ಕಾರ್ಯಾಧ್ಯಕ್ಷ ಶ್ರೀಕೃಷ್ಣ ಭಟ್‌ ಪಠೊಳಿ, ಸಂಘಟನ ಕಾರ್ಯದರ್ಶಿ ವಿಶ್ವನಾಥ ರೈ ಅರ್ಗುಡಿ, ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು, ಬೈಲುವಾರು ಸಮಿತಿ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here