Home ಧಾರ್ಮಿಕ ಸುದ್ದಿ ರಥಬೀದಿಯ ಶ್ರೀ ವೆಂಕಟ್ರಮಣದೇವಸ್ಥಾನದಲ್ಲಿ ಬಲೀಂದ್ರ ಪೂಜೆ

ರಥಬೀದಿಯ ಶ್ರೀ ವೆಂಕಟ್ರಮಣದೇವಸ್ಥಾನದಲ್ಲಿ ಬಲೀಂದ್ರ ಪೂಜೆ

1416
0
SHARE

ಮಹಾನಗರ: ಬಲಿಪಾಡ್ಯ ಪ್ರಯುಕ್ತ ರಥಬೀದಿಯ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಬಲೀಂದ್ರ ಪೂಜೆ ಆಚರಿಸಲಾಯಿತು.

ಕಳೆದ ವಿತ್ತ ವರ್ಷದ ಆಯ-ವ್ಯಯ ಪತ್ರವನ್ನು ಶ್ರೀ ದೇವರಿಗೆ ಸಾಂಪ್ರದಾಯಿ ಕವಾಗಿ ಸಮರ್ಪಿಸಿದ ಬಳಿಕ ದೇಗುಲದ
ವ್ಯವಸ್ಥಾಪಕ ನಾರಾಯಣ ಕಾಮತ್‌ ಬಹಿರಂಗವಾಗಿ ಓದಿದರು.

ರಾಘವೇಂದ್ರ ಆಚಾರ್ಯ ಹಾಗೂ ದೇಗುಲದ ತಂತ್ರಿಗಳಾದ ಪಂಡಿತ್‌ ನರಸಿಂಹ ಆಚಾರ್ಯ ಬಲೀಂದ್ರ ಪೂಜೆಯ ವಿಶೇಷತೆ ಹಾಗೂ ಪೌರಾಣಿಕ ಹಿನ್ನೆಲೆಯನ್ನು ವಿವರಿಸಿದರು.
ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯಿತು.

ದೇಗುಲದ ಪ್ರಧಾನ ಅರ್ಚಕರಾದ ಹರೀಶ್‌ ಭಟ್‌, ನರಸಿಂಹ ಭಟ್‌, ಮೊಕ್ತೇಸರರಾದ ಸಿ.ಎಲ್‌. ಶೆಣೈ, ಕೆ.ಪಿ. ಪ್ರಶಾಂತ್‌ ರಾವ್‌, ರಮಚಂದ್ರ ಕಾಮತ್‌ ಹಾಗೂ ಸಮಾಜ ಬಾಂಧವರು
ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here