Home ಧಾರ್ಮಿಕ ಸುದ್ದಿ ಬಾಲಾಲಯ ಪ್ರತಿಷ್ಠೆ

ಬಾಲಾಲಯ ಪ್ರತಿಷ್ಠೆ

423
0
SHARE

ಸುಬ್ರಹ್ಮಣ್ಯ : ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಮುಂದಿನ ಫೆಬ್ರವರಿ ತಿಂಗಳಲ್ಲಿ ನಡೆಯುವ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ದೇವಸ್ಥಾನದ ಗರ್ಭಗುಡಿ ದುರಸ್ತಿ ಹಾಗೂ ದೇವಸ್ಥಾನದ ಇತರ ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಉದ್ದೇಶದಿಂದ ಶ್ರೀ ದೇವರನ್ನು ಬಾಲಾಲಯದಲ್ಲಿ ರವಿವಾರ ಪ್ರತಿಷ್ಠಾಪಿಸಲಾಯಿತು.

ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ಉಚ್ಚಿಲ ಅವರ ನೇತೃತ್ವದಲ್ಲಿ ಅರ್ಚಕ ಸುಬ್ರಹ್ಮಣ್ಯ ನರಸಿಂಹ ಭಟ್‌ ಸಹಕಾರದಲ್ಲಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ದೇವರಲ್ಲಿ ಪ್ರಾರ್ಥನೆ ನಡೆಸಿದ ಬಳಿಕ ಕಲಶ ಪೂಜೆ ಇತ್ಯಾದಿಗಳು ನಡೆದು ಬಳಿಕ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು.

ಶನಿವಾರ ರಾತ್ರಿ ದೇವಸ್ಥಾನದಲ್ಲಿ ಸುದರ್ಶನ ಹೋಮ ನಡೆಯಿತು. ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಮಕೃಷ್ಣ ಕುಧ್ಕುಳಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್‌
ಕೂಜುಗೋಡು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಿಶೋರ್‌ ಕೂಜುಗೋಡು, ಆರ್ಥಿಕ ಸಮಿತಿ ಅಧ್ಯಕ್ಷ ಭವಾನಿ ಶಂಕರ ಪಿಂಡಿಮನೆ, ಗೌರವಾಧ್ಯಕ್ಷ ಡಾ| ಚಂದ್ರಶೇಖರ ಕಿರಿಭಾಗ, ವ್ಯವಸ್ಥಾಪನ ಸಮಿತಿ ಸದಸ್ಯ ಶೈಲೇಶ್‌ ಕಟ್ಟೆಮನೆ, ಉಷಾ ಪ್ರಭಾಕರ ಕಿರಿಭಾಗ, ಡಿ.ಎಸ್‌. ಶ್ರೀಧರ್‌ ಭಾಗವತ್‌, ಶೋಭಾಮಣಿ ಕೋಡಿಯಡ್ಕ, ದಿವಾಕರ ಮುಂಡಾಜೆ, ಸಮಿತಿಗಳ ಪ್ರಮುಖರಾದ ನಾರಾಯಣ ಪುಳಿಕುಕ್ಕು, ಜನಾರ್ದನ ಗುಂಡಿಹಿತ್ಲು, ಪದ್ಮನಾಭ ಕರಂಗಲ್ಲು, ಜಯರಾಮ ಕರಂಗಲ್ಲು, ಕೇಶವಮೂರ್ತಿ ಭಟ್‌ ಪಳ್ಳತ್ತಡ್ಕ, ತಾರಾನಾಥ ಮುಂಡಾಜೆ, ಶಿವರಾಮ ಕಜೊಡಿ, ಬೆಳ್ಯಪ್ಪ ಖಂಡಿಗೆ, ಮೂಕಾಂಬಿಕಾ ಗುಂಡಿಹಿತ್ಲು, ಚಂದ್ರಮೋಹನ್‌ ನೆತ್ತಾರ, ಕುಶಾಲಪ್ಪ ಕಾಂತುಕುಮೇರಿ, ತೇಜಕುಮಾರ ಮುಂಡಕಜೆ, ಉಮೇಶ್‌ ಕಜೊಡಿ, ಕಿಶೋರ್‌ ಮುಂಡಾಜೆ, ಸಹಾಯಕ ಅರ್ಚಕ ಕೃಷ್ಣ ಭಟ್‌ ಹಾಗೂ ಕೂಡುಗಟ್ಟಿನ ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here