ಬೆಳ್ತಂಗಡಿ : ಸವಣಾಲು ಬದ್ರಿಯಾ ಜುಮಾ ಮಸೀದಿಯಲ್ಲಿ ಬಕ್ರೀದ್ ಹಬ್ಬವನ್ನು ಆಚರಿಸಲಾಯಿತು. ಮಸೀದಿಯ ಮುಖ್ಯಗುರು ಎಂ. ಮುಹಮ್ಮದ್ ರಫೀಕ್ ಮದನಿ ಉಸ್ತಾದರು ಹಬ್ಬದ ವಿಶೇಷತೆಯನ್ನು ತಿಳಿಸಿದರು.
ಜಮಾತ್ ಆಡಳಿತ ಸಮಿತಿಯ ಅಧ್ಯಕ್ಷ ಡಿ. ರಫೀಕ್, ಎಂ.ಜಿ. ತಲ್ಹತ್, ಹಿಮಯತುಲ್ ಇಸ್ಲಾಂ ಮದ್ರಸ ಸವ ಣಾಲು ಇದರ ಮುಅಲ್ಲಿಂ ಉಸ್ತಾದ್ ಅಬ್ದುಲ್ ರಝಾಕ್ ಮದನಿ, ಆಡಳಿತ ಸಮಿತಿಯ ಪ್ರ. ಕಾರ್ಯದರ್ಶಿ ಡಿ. ಇಸಾಕ್, ಉಪಾಧ್ಯಕ್ಷ ಎಸ್.ಎ. ಮುಹಮ್ಮದ್ ಅಲಂಬು, ಜತೆ ಕಾರ್ಯದರ್ಶಿ ಸದಕತ್, ಸದಸ್ಯರಾದ ಜಿ. ಇಸುಬು, ಡಿ. ಹಸನಬ್ಬ, ಡಿ. ಮುಹಮ್ಮದ್, ಅಬ್ದುಲ್ ರಹಿಮಾನ್, ಎಸ್.ಎ. ಇಬ್ರಾಹಿಂ, ರಮ್ಲಾನ್, ಆಸಿಫ್, ಸಿ.ಎಂ. ಶರೀಫ್, ಸುಲೈಮಾನ್ ಲತೀಫಿ, ಜಮಾಅತ್ನ ಹಿರಿಯರಾದ ಎಸ್.ಎಚ್. ಹಾಮದ್, ಕೆ. ಅರಬಿ, ಎಸ್.ಎ. ಹಸನಬ್ಬ ಮತ್ತಿತರರಿದ್ದರು.