Home ಧಾರ್ಮಿಕ ಸುದ್ದಿ ಮರಳಿನಲ್ಲಿ ಅರಳಿದ ಕಟೀಲು ಶ್ರೀ ಭ್ರಮರಾಂಬಿಕೆಯ ಚಿತ್ರ

ಮರಳಿನಲ್ಲಿ ಅರಳಿದ ಕಟೀಲು ಶ್ರೀ ಭ್ರಮರಾಂಬಿಕೆಯ ಚಿತ್ರ

1036
0
SHARE

ಬಜಪೆ: ಸಹಸ್ರಾರು ಭಕ್ತರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಗುರುವಾರ ಜರಗಿದ ಕಟೀಲು ಬ್ರಹ್ಮಕಲಶೋತ್ಸವವು ಹಲವು ರೀತಿಯಲ್ಲಿ ಭಕ್ತರನ್ನು ಕ್ಷೇತ್ರದತ್ತ ಗಮನಸೆಳೆಯಿತು. ದೇಗುಲದ ಕುದ್ರುವಿನಲ್ಲಿ ಮಂಗಳೂರಿನ ಚಿತ್ರ ಕಲಾವಿದ ಹರೀಶ್‌ ಆಚಾರ್ಯ ಅವರು ಮರಳಿನಲ್ಲಿ ಬಿಡಿಸಿದ ಕಟೀಲು ಭ್ರಮರಾಂಬಿಕೆ ಚಿತ್ರವೂ ನೆರೆದಿದ್ದ ಭಕ್ತ ಸಮೂಹವನ್ನು ಆಕರ್ಷಿಸಿ ಭಕ್ತಿ, ಭಾವಪರಾವಶಕ್ಕೆ ಕಾರಣವಾಯಿತು.

ಹರೀಶ್‌ ಆಚಾರ್ಯ ಅವರು 2 ದಿನಗಳ ಅವಧಿಯಲ್ಲಿ ಈ ಚಿತ್ರವನ್ನು ಬಿಡಿಸಿದ್ದು ಅವರಿಗೆ ಪ್ರಸಾದ್‌ ಕುಲಾಲ್‌ ಸಾಥ್‌ ನೀಡಿದ್ದಾರೆ. ಕಟೀಲು ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯು ಅವರಿಗೆ ಸಮುದ್ರದ ಮರಳನ್ನು ನೀಡಿ ಸಹಕರಿಸಿದೆ.

ಕುದ್ರುವಿಗೆ ಬಂದ ಭಕ್ತರು ಈ ಕಲೆಗೆ ಆಕರ್ಷಿತರಾಗಿ ಕೆಲವರಂತೂ ಭಕ್ತಿಬಾವದಿಂದ ಕೈಮುಗಿಯುವ ದೃಶ್ಯ ಕಂಡು ಬಂದಿದೆ. ಕೆಲವರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಇಲ್ಲಿಯೂ ಜನ ಗುಂಪು ಕೂಡಿ ಬರುತ್ತಿದ್ದಾರೆ. ಕಟೀಲು ದೇವರ ಪ್ರೇರಣೆಯಿಂದ, ಸಮಿತಿಯ ಸಹಕಾರದಿಂದ ಈ ಕಲೆಯನ್ನು ಬಿಂಬಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಹರೀಶ್‌ ಆಚಾರ್ಯ.

10 ವರ್ಷಗಳಿಂದ ಈ ಕಲೆಯನ್ನು ಕರಗತ ಮಾಡಿರುವ ಹರೀಶ್‌ ಅವರಿಗೆ ಸಜೀಪದ ಕೇಶವ ಸುವರ್ಣ ಅವರು ಗುರುಗಳು. ಪಣಂಜೂರು ಬೀಚ್‌ನಲ್ಲಿ ಶಾರದೆ, ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಶಂಕರ ನಾರಾಯಣ, ಕೊಂಚಾಡಿ ಶ್ರೀರಾಮ ಶಾಲೆಯ ಸಮಾರಂಭದಲ್ಲಿ ಶಾರದೆ, ಜಲ್ಲಿಗುಡ್ಡೆ ನಾಗಮಂಡಲೋತ್ಸವದಲ್ಲಿ ನಾಗಕನ್ನಿಕೆ, ಕಾರ್ಕಳದಲ್ಲಿ ಮೋದಿ-ಶಿವಾಜಿ ಸಹಿತ ಉಳ್ಳಾಲ ಅಬ್ಬಕ್ಕ ಉತ್ಸವ, ಕುಡುಪು ಶ್ರೀ ಆನಂತ ಪದ್ಮನಾಭ ದೇಗುಲದ ಬಹ್ಮ ಕಲಶ‌ದಲ್ಲಿ ಮರಳು ಚಿತ್ರವನ್ನು ರಚಿಸಿದ್ದಾರೆ.

LEAVE A REPLY

Please enter your comment!
Please enter your name here