Home ಧಾರ್ಮಿಕ ಕಾರ್ಯಕ್ರಮ ಬೈಂದೂರು: ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ

ಬೈಂದೂರು: ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ

1339
0
SHARE

ಬೈಂದೂರು: ಶ್ರೀ ಸೀತಾ ರಾಮಚಂದ್ರ ದೇವಸ್ಥಾನ ಬೈಂದೂರು ಇದರ ರಾಮಕ್ಷತ್ರಿಯ ಸಮಾಜದ 13ನೇ ವರ್ಷದ ಸೀತಾ ರಾಮಚಂದ್ರ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸ್ವರ್ಣವಲ್ಲಿ ಮಠಾಧೀಶ ಶ್ರೀ ಗಂಗಾಧರೇಂದ್ರ ಶ್ರೀಗಳು ಭಗವಂತನ ಕಲ್ಯಾಣೋತ್ಸವದಿಂದ ಸಮಾಜ ಸುಭಿಕ್ಷೆಯಾಗುತ್ತದೆ. ನಾವು ನಮ್ಮ ಜೀವನದಲ್ಲಿ ಆದರ್ಶ, ತತ್ವ, ಉತ್ತಮ ಚಿಂತನೆ ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಮಾಜಿ ಶಾಸಕ ಕೆ.ಲಕ್ಷ್ಮಿ ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ರಾಮಕ್ಷತ್ರೀಯ ಸಂಘದ ಅಧ್ಯಕ್ಷ ಬಿ.ಗೋಪಾಲ ನಾಯಕ್‌,ಕುಂದಾಪುರ ರಕ್ಷಾ ಚಾರಿಟೆಬಲ್‌ ಅಧ್ಯಕ್ಷ ಚಂದ್ರಶೇಖರ,ಮಾತೃ ಮಂಡಳಿ ಅಧ್ಯಕ್ಷೆ ಶಾಲಿನಿ,ಸೇವಾ ಕರ್ತರಾದ ಭಾಗೀರಥಿ, ಎಚ್‌.ಆರ್‌. ಶಶಿಧರ ನಾಯ್ಕ, ನಾಗರಾಜ,ಅನುಪಮಾ ಮತ್ತಿತರರು ಉಪಸ್ಥಿತರಿದ್ದರು.

ಭಗವದ್ಗೀತಾ ಅಭಿಯಾನ ಜಿಲ್ಲಾ ಸಂಚಾಲಕ ಬಿಜೂರು ರಾಮಕೃಷ್ಣ ಶೇರುಗಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣಪತಿ ಹೋಬಳಿದಾರ್‌ ಕಾರ್ಯಕ್ರಮ ನಿರ್ವಹಿಸಿದರು. ಗಣಪತಿ ಎಸ್‌. ವಂದಿಸಿದರು.

LEAVE A REPLY

Please enter your comment!
Please enter your name here