Home ಧಾರ್ಮಿಕ ಸುದ್ದಿ ಬೈಲೂರು ಶ್ರೀ ಮಹಿಷಮರ್ದಿನಿ ದೇಗುಲ

ಬೈಲೂರು ಶ್ರೀ ಮಹಿಷಮರ್ದಿನಿ ದೇಗುಲ

866
0
SHARE

ಉಡುಪಿ: ಬೈಲೂರು 76 ಬಡಗಬೆಟ್ಟು ಶ್ರೀ ಮಹಿಷಮರ್ದಿನಿ ದೇಗುಲದಲ್ಲಿ ವಿದ್ವಾನ್‌ ಕೆ.ಎ. ಸರ್ವೋತ್ತಮ ತಂತ್ರಿ ನೇತೃತ್ವದಲ್ಲಿ ಅ. 10 – 19ರವರೆಗೆ ಶರನ್ನವರಾತ್ರಿ ಮಹೋತ್ಸವ ಸಂಪನ್ನ ಗೊಳ್ಳಲಿದೆ. ಅ. 10ರ ಬೆಳಗ್ಗೆ 7.30 – 8.30ರ ವರೆಗೆ ಕದಿರು ಕಟ್ಟುವುದು, ಅ. 13 ರಂದು ಸಾನ್ನಿಧ್ಯದ ಚಂಡಿಕಾ ಯಾಗ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ,
ಅ. 14ರ ಪೂರ್ವಾಹ್ನ 11.30ಕ್ಕೆ ನಾಗ ದರ್ಶನ, ಅ. 19ರಂದು ಪಂಚವಿಂಶತಿ ಕಲಶಾ ಪ್ರಧಾನ ಹೋಮ, ಮಹಾ ಮಂತ್ರಾಕ್ಷತೆ ನಡೆಯಲಿದೆ. ಪ್ರತಿದಿನ ಸಂಜೆ 6 – 8ರ ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ ಎಂದು ದೇಗುಲದ ಆಡಳಿತ ಮೊಕ್ತೇಸರ ಎ. ರಮೇಶ್‌ ಶೆಟ್ಟಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here