Home ಧಾರ್ಮಿಕ ಕ್ಷೇತ್ರಗಳು ಬಾಹುಬಲಿ ಮಸ್ತಾಕಾಭಿಷೇಕ; ರತ್ನಗಿರಿ ಬೆಟ್ಟದಲ್ಲಿ ಯಜ್ಞಶಾಲೆ

ಬಾಹುಬಲಿ ಮಸ್ತಾಕಾಭಿಷೇಕ; ರತ್ನಗಿರಿ ಬೆಟ್ಟದಲ್ಲಿ ಯಜ್ಞಶಾಲೆ

736
0
SHARE

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಸಂದÀರ್ಭದಲ್ಲಿ ಧಾರ್ಮಿಕ ವಿಧಿವಿಧಾನಗಳಿಗಾಗಿ ರತ್ನಗಿರಿ ಬೆಟ್ಟದಲ್ಲಿ ಯಜ್ಞಶಾಲೆ ನಿರ್ಮಾಣಗೊಂಡಿದೆ. ಜೈನ ಧರ್ಮದಲ್ಲಿ ಯಜ್ಞಶಾಲೆಗೆ ಅದರದ್ದೇ ಆದ ಮಹತ್ವವಿದೆ. ಇದು ಗುಡಿಸಲಿನಂತೆ ರೂಪುಗೊಂಡಿದ್ದು, ಭಕ್ತಾಧಿಗಳ ಗಮನಸೆಳೆಯುತ್ತಿದೆ.
ಪ್ರಾಚೀನತೆಯ ನೆನಪನ್ನು ಮರುಕಳಿಸುವಂತಹ ಶೈಲಿಯಲ್ಲಿ ರೂಪುಗೊಂಡಿದ್ದು, ಇದುಧಾರ್ಮಿಕ ಚಿಂತನೆಗಳಿಗೆ ಒಗ್ಗುವಂತ ವಾತಾವರಣವನ್ನು ಸೃಷ್ಠಿಸಿದೆ. ಬಿದಿರಿನ ವಿನ್ಯಾಸ, ಮುಳಿ ಹುಲ್ಲಿನ ಬಳಕೆ ಯಜ್ಞಶಾಲೆಯ ಮೆರುಗನ್ನು ಇಮ್ಮಡಿಗೊಳಿಸಿದೆ. ಯಜ್ಞಕುಂಡ, ತ್ಯಾಗಮೂರ್ತಿ ವಿಗ್ರಹ, ಮಂತ್ರೋದ್ಗಾರ ನೆರೆದಿದ್ದವರನ್ನು ಭಕ್ತಿ ಲೋಕಕ್ಕೆ ಕೊಂಡೊಯ್ಯುತ್ತಿದೆ.

ಮಹಾಮಸ್ತಕಾಭಿಷೇಕದ ಸಲುವಾಗಿ ರೂಪುಗೊಂಡಿರುವ ಈ ಯಜ್ಞಶಾಲೆಯಲ್ಲಿ ಪ್ರತಿದಿನವೂ ಪಂಚಕಲ್ಯಾಣದ ವಿಧಿವಿಧಾನಗಳು ನಡೆಯುತ್ತಿರುತ್ತವೆ. ಬಾಹುಬಲಿಯ ಹುಟ್ಟಿನಿಂದ ದೀಕ್ಷೆ ಪಡೆದವರೆಗಿನ ಐದು ಕಲ್ಯಾಣಗಳಿಗೆÀ ಸಂಬಂಧಪಟ್ಟ ಪೂಜಾ ಕೈಂಕರ್ಯಗಳು ಪ್ರತಿದಿನವೂ ಇಲ್ಲಿ ನಡೆಯುತ್ತವೆ. ಭಗವಾನ್ ಬಾಹುಬಲಿಯ ಸ್ಮರಣೆಯಲ್ಲಿ ಯಾಗಮಂಡಲ ಆರಾಧನೆ, ಯಕ್ಷಾರಾಧನೆ, ಸೇರಿದಂತೆ ಮೂರು ಆರಾಧನೆಗಳು ಪೂರ್ತಿಗೊಂಡಿವೆ. ಯಜ್ಞಶಾಲೆಯಲ್ಲಿ ಪ್ರತಿದಿನವೂ ಹೋಮ ಹವನಗಳು ನಡೆಯುತ್ತಿರುತ್ತವೆ. ಮಹಾಮಸ್ತಕಾಭಿಷೇಕದ ಹತ್ತು ದಿನವೂ ತ್ಯಾಗಮೂರ್ತಿಗೆ ವಿಶೇಷ ಪೂಜೆಗಳು ನಡೆಯುತ್ತವೆ.

-ದೀಕ್ಷಾ. ಬಿ, ದ್ವಿತೀಯ ಎಂ.ಸಿ.ಜೆ, ಎಸ್.ಡಿ.ಎಮ್ ಕಾಲೇಜು ಉಜಿರೆ
ಚಿತ್ರ: ವಿಟ್ಟು ಪ್ರಸನ್ನ

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here