ಉಳ್ಳಾಲ : ಇಲ್ಲಿನ ದಾರಂದ ಬಾಗಿಲು ಬದ್ರಿಯಾ ಜುಮಾ ಮಸೀದಿಯ 15ನೇ ಸ್ವಲಾತ್ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಉಳ್ಳಾಲ ಖಾಝಿ ಅಸ್ಸಯ್ಯಿದ್ ಫಝಲ್ ಕೊಯಮ್ಮ ತಂಙಳ್ ಅಲ್ ಬುಖಾರಿ ಕೂರತ್ ಅವರು ಸ್ವಲಾತ್‌ಗೆ ನೇತೃತ್ವ ನೀಡಿ ದುಆದೊಂದಿಗೆ ಚಾಲನೆ ನೀಡಿದರು.
ಮಸೀದಿ ಅಧ್ಯಕ್ಷ ಮುಸ್ತಫಾ ಮುಂಡೋಳಿ ಅಧ್ಯಕ್ಷತೆ ವಹಿಸಿದ್ದರು. ಖತೀಬರಾದ ಇಸ್ಮಾಯಿಲ್ ಸಖಾಫಿ ಚಾಲನೆ ನೀಡಿದರು. ಅನಂತರ ಪೊಸೋಟ್ ತಂಙಳ್ ಅವರ ಸುಪುತ್ರ ಮುಖ್ಯ ಪ್ರಭಾಷಣ ಮಾಡಿ ಕೂಟು ಪ್ರಾರ್ಥನೆಗೆ ನೇತೃತ್ವ ನೀಡಿದರು. ಮಸೀದಿಯ ಮಾಜಿ ಅಧ್ಯಕ್ಷ ಹಮೀದ್ ಮುಂಡೋಳಿ, ಪಿ.ಸಿ. ಸಲೀಂ, ಮಾಜಿ ಉಪಾಧ್ಯಕ್ಷ ಅಬ್ದುಲ್ ಖಾದರ್, ಖಜಾಂಚಿ ರಫೀಕ್ ಮುಂಡೋಳಿ ಉಪಸ್ಥಿತರಿದ್ದರು. ಶರೀಫ್ ಸಅದಿ ಸ್ವಾಗತಿಸಿದರು