ಬದಿಯಡ್ಕ: ಜಗದ್ಗುರು ಶ್ರೀ ಆದಿ ಶಂಕರಾಚಾರ್ಯ ತೋಟಕಾಚಾರ್ಯ ಸಂಸ್ಥಾನದ ಶ್ರೀಮದ್ ಎಡನೀರು ಮಠಾ ಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಗಳ 59ನೇ ಚಾತುರ್ಮಾಸ್ಯ ವ್ರತಾಚರಣೆ ವಿವಿಧ ವಿಧಿವಿಧಾನಗಳೊಂದಿಗೆ ಶನಿವಾರ ಸಂಪನ್ನಗೊಂಡಿತು.
ಶ್ರೀ ಮಠದಲ್ಲಿ ಶನಿವಾರ ಅಪರಾಹ್ನ ನಡೆದ ಸಮಾರಂಭದಲ್ಲಿ ಮಠದ ಪರಿಸರದ ಮಧುವಾಹಿನಿ ನದಿ ತಟದಲ್ಲಿ ಮೃತ್ತಿಕಾ ವಿಸರ್ಜನೆ, ಸೀಮೋಲ್ಲಂಘನದೊಂದಿಗೆ ಜು. 25ರಿಂದ ಕೈಗೊಂಡಿದ್ದ ಶ್ರೀಗಳ 59ನೇ ಚಾತುರ್ಮಾಸ ವ್ರತಾನುಷ್ಠಾನ ಕೊನೆಗೊಂಡಿತು.
ಬೆಳಗ್ಗೆ ವಿವಿಧ ವೈದಿಕ ವಿಧಿವಿಧಾನಗಳು ನಡೆದು ಮಹಾಗಣಪತಿ ಹವನ, ಮಧ್ಯಾಹ್ನ ಮಹಾಪೂಜೆ ನೆರವೇರಿತು. ಬಳಿಕ ಚಾತುರ್ಮಾಸ ವ್ರತಾನುಷ್ಠಾನದ ಮೃತ್ತಿಕಾ ವಿಸರ್ಜನೆ ಹಾಗೂ ಎಡನೀರು ವಿಷ್ಣುಮಂಗಲ ಶ್ರೀ ಮಹಾವಿಷ್ಣು ದೇವಾಲ ಯದಲ್ಲಿ ಸೀಮೋಲ್ಲಂಘನ ವಿಧಿಗಳು ನೆರವೇರಿದವು.
ರಾತ್ರಿ ಮಹಾಪೂಜೆ, ಭಜನ ಮಂಗ ಲೋತ್ಸವ, ಗುರುವಂದನೆ, ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ಕಾಸರ ಗೋಡು ಸಂಸದ ರಾಜಮೋಹನ ಉಣ್ಣಿ ತ್ತಾನ್ ಶ್ರೀ ಮಠ ಸಂದರ್ಶಿಸಿ ಶ್ರೀಗಳ ಅನುಗ್ರಹ ಪಡೆದರು. ಶುಕ್ರವಾರ ಸಂಜೆ ಚಾತುರ್ಮಾಸ್ಯದ ಕಾರ್ಯ ಕ್ರಮಗಳ ಭಾಗವಾಗಿ ಶ್ರೀಗಳಿಂದ ಭಜನ್ ಸಂಧ್ಯಾ ನೆರವೇರಿತು. ವಿದ್ವಾನ್ ಸೂರ್ಯ ಉಪಾಧ್ಯಾಯ ಬೆಂಗಳೂರು (ಹಾರ್ಮೋನಿಯಂ), ವಿ| ಅನೂರು ಅನಂತಕೃಷ್ಣ ಶರ್ಮ ಬೆಂಗಳೂರು (ತಬ್ಲಾ), ವಿ| ಭರತ್ ಆತ್ರೇಯಸ್ ಬೆಂಗಳೂರು (ಕೊಳಲು), ವಿ| ಜಗದೀಶ ಕುರ್ತಕೋಟಿ (ತಬ್ಲಾ) ಸಹಕರಿಸಿದರು.