Home ಧಾರ್ಮಿಕ ಸುದ್ದಿ ವರಮಹಾಲಕ್ಷ್ಮೀ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ವರಮಹಾಲಕ್ಷ್ಮೀ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

•ಹಿಂದೂ ಸಂಘಟನೆಗಳ ಸಮಾವೇಶ

152
0
SHARE
ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಬದಿಯಡ್ಕ: ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಹಾಗೂ ಮಾತೃಶಕ್ತಿ ಬದಿಯಡ್ಕ ಪ್ರಖಂಡದ ಸಮಾವೇಶ ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ಜರಗಿತು. ಈ ಸಂದರ್ಭದಲ್ಲಿ ಆಗಸ್ಟ್‌ ನಲ್ಲಿ ನಡೆಯಲಿರುವ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಸಂಘ ಟನೆಯ ಬಲವರ್ಧನೆಯ ಕುರಿತು ಚರ್ಚೆ ನಡೆಸಲಾಯಿತು. ವಿಶ್ವ ಹಿಂದೂ ಪರಿಷತ್‌ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್, ಬಜರಂಗದಳ ಪ್ರಾಂತ್ಯ ಸಹ ಸಂಯೋಜಕ್‌ ಮುರಳೀಕೃಷ್ಣ ಹಂಸತ್ತಡ್ಕ ಮಾಹಿತಿ ನೀಡಿದರು. ಬದಿಯಡ್ಕ ಪ್ರಖಂಡ ಅಧ್ಯಕ್ಷ ಲಕ್ಷ್ಮಣ ಪ್ರಭು ಕರಿಂಬಿಲ ಅಧ್ಯಕ್ಷತೆ ವಹಿಸಿದರು.

ಜಿಲ್ಲಾಧ್ಯಕ್ಷ ಅಂಗಾರ ಶ್ರೀಪಾದ, ವಿಶ್ವ ಹಿಂದೂ ಪರಿಷತ್‌ ನೇತಾರರಾದ ಶಂಕರ ಭಟ್ ಉಳುವಾನ, ಗೋಪಾಲ ಶೆಟ್ಟಿ ಅರಿಬೈಲ್, ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಆರ್‌.ಎಸ್‌.ಎಸ್‌. ಬದಿಯಡ್ಕ ಸಂಘ ಚಾಲಕ ಶಿವಕೃಷ್ಣ ಭಟ್ ಪಳ್ಳತ್ತಡ್ಕ, ವಿಶ್ವ ಹಿಂದೂ ಪರಿಷತ್‌ ಬದಿಯಡ್ಕ ಪಂಚಾಯತ್‌ ಅಧ್ಯಕ್ಷ ಮಹೇಶ್‌ ವಳಕುಂಜ, ಬಿ.ಎಂ.ಎಸ್‌. ಪಂಚಾಯತ್‌ ಅಧ್ಯಕ್ಷ ರವಿ ಬೇರ್ಕಡವು, ಮಾತೃಶಕ್ತಿಯ ನೇತಾರೆಯಾದ ಪುಷ್ಪ ಬದಿಯಡ್ಕ, ಶಾರದಾ ನಾಯ್ಕ ಬದಿಯಡ್ಕ, ಉಷಾ ಗಿರೀಶ್‌ ವಳಮಲೆ, ವಿಶ್ವನಾಥ ಪ್ರಭು ಕರಿಂಬಿಲ, ಬಾಲಕೃಷ್ಣ ಶೆಟ್ಟಿ ಕಡಾರ್‌, ಅವಿನಾಶ್‌ ರೈ ಬದಿಯಡ್ಕ, ಸುನಿಲ್ ಕಿನ್ನಿಮಾಣಿ, ರೂಪೇಶ್‌ ಬದಿಯಡ್ಕ, ರಾಜೇಶ್‌, ಹಿತೇಶ್‌ ಬದಿಯಡ್ಕ ಅವರು ಉಪಸ್ಥಿತರಿದ್ದರು. ಪ್ರಖಂಡ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್‌ ರೈ ಪುತ್ರಕಳ ಅವರು ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here