Home ಧಾರ್ಮಿಕ ಸುದ್ದಿ ಕುಕ್ಕಂಗೋಡ್ಲು: ಬಾಲಾಲಯ ಪ್ರತಿಷ್ಠೆ

ಕುಕ್ಕಂಗೋಡ್ಲು: ಬಾಲಾಲಯ ಪ್ರತಿಷ್ಠೆ

1592
0
SHARE

ಬದಿಯಡ್ಕ: ನೀರ್ಚಾಲು ಸಮೀಪದ ಕುಕ್ಕಂಗೋಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕೆಲಸಗಳು ನಡೆಯುತ್ತಿದ್ದು ನೂತನ ಗಣಪತಿ ಗುಡಿಯ ನಿರ್ಮಾಣದ ಅಂಗವಾಗಿ ಹಳೆಯ ಗುಡಿಯಿಂದ ವಿಗ್ರಹ ತೆಗೆದು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು.
ದೇಲಂಪಾಡಿ ಬಾಲಕೃಷ್ಣ ತಂತ್ರಿಗಳು ನೇತೃತ್ವ ವಹಿಸಿದರು. ವೀರವೆಂಕಟ ಹಂದೆ, ಪರಮೇಶ್ವರ ಭಟ್‌, ಅರ್ಚಕ ರಾಮಕೃಷ್ಣ ಮಯ್ಯ, ನರಸಿಂಹ ಮಯ್ಯ ಸಹಕರಿಸಿದರು. ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಮಹೇಶ್‌ ಭಟ್‌. ಪೆರ್ವ, ಕೃಷ್ಣ ಭಟ್‌, ಗಣರಾಜ ಕೊಡ್ಮಾಡ್‌, ಸಮಿತಿ ಪದಾಧಿಕಾರಿಗಳು, ಸದಸ್ಯರು, ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here