Home ಧಾರ್ಮಿಕ ಸುದ್ದಿ ನೆಕ್ರಾಜೆ ದೇಗುಲ:ಕಾರ್ಕಳದಿಂದ ಶಿಲೆಯ ಆಗಮನ

ನೆಕ್ರಾಜೆ ದೇಗುಲ:ಕಾರ್ಕಳದಿಂದ ಶಿಲೆಯ ಆಗಮನ

1191
0
SHARE
ಗೋಪಾಲಕೃಷ್ಣ ದೇವಸ್ಥಾನದ ಗರ್ಭ ಗುಡಿಯ ನಿರ್ಮಾಣಕ್ಕಾಗಿ ಕಾರ್ಕಳದಿಂದ ಆಗಮಿಸಿದ ಶಿಲೆ.

ಬದಿಯಡ್ಕ: ನೆಕ್ರಾಜೆ ಗ್ರಾಮ ದೇವಸ್ಥಾನವಾದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ಶಿಲಾಮಯ ಗರ್ಭ ಗುಡಿಯ ನಿರ್ಮಾಣ ಕಾರ್ಯಗಳಿಗಾಗಿ ಕಾರ್ಕಳ ದಿಂದ ಶಿಲೆಯನ್ನು ಭಕ್ತರ ಸಮೂಹದಿಂದ ಮೆರವಣಿಗೆ ಮೂಲಕ ತರಲಾಯಿತು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಬಿ.ವಸಂತ ಪೈ, ಮಾತಾಡಿ ಈ ದೇವಾಲಯವು ಸೀಮೆಯ ಒಂದು ಪ್ರಸಿದ್ಧ ಕಾರಣಿಕದ ಕ್ಷೇತ್ರವಾಗಿದ್ದು, ನೆಕ್ರಾಜೆ ಗ್ರಾಮಸ್ಥರ ಗ್ರಾಮ ದೇಗುಲವೆಂದೇ ಪ್ರತೀತವಾಗಿದೆ.

ನೆಕ್ರಾಜೆ ನಿವಾಸಿಗಳು ನೀಡುತ್ತಿರುವ ಪೂರ್ಣ ಸಹಕಾರ ಮತ್ತು ಉತ್ಸಾಹ ಇಲ್ಲಿನ ಕೆಲಸ ಕಾರ್ಯಗಳು ಅತ್ಯಂತ ವೇಗವಾಗಿ ನಡೆದು ಪುನರ್‌ಪ್ರತಿಷ್ಠಾ ಕಾರ್ಯವನ್ನು ಕಾಣಲಿದೆ ಎಂದು ಹೇಳಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ‌ ಶಂಕರ ನಾರಾಯಣ ಮಯ್ಯ, ಕಾರ್ಯದರ್ಶಿ ಗಣೇಶ ವತ್ಸ ನೆಕ್ರಾಜೆ, ಆನುವಂಶಿಕ ಮೊಕ್ತೇಸರರಾದ ನೆಕ್ರಾಜೆ ಸೀತಾರಾಮ ಶೆಟ್ಟಿ , ಸೇವಾ ಸಮಿತಿ ಅಧ್ಯಕ್ಷ‌ ಗಂಗಾಧರ ಮಣಿಯಾಣಿ ನೆಲ್ಲಿತ್ತಲ, ರತ್ನಾಕರ ಮಾವಿನಕಟ್ಟೆ, ಗೋಪಾಲ ಭಟ್ ಕೋಳಾರಿ ಶುಭಹಾರೈಸಿದರು

ಶ್ರೀ ಕ್ಷೇತ್ರ ಮಹಿಳಾ ಸಂಘ ನೆಕ್ರಾಜೆ, ಶ್ರೀ ಗೋಪಾಲ ಕೃಷ್ಣ ಭಜನಾ ಸಂಘ ನೆಕ್ರಾಜೆ ಮತ್ತು ವಿವಿಧ ಸಂಘ ಸಂಸ್ಥೆಗಳ ಹಾಗೂ ಕ್ಲಬ್‌ಗಳ ಪದಾಧಿಕಾರಿಗಳು ಹಾಗೂ ಸದಸ್ಯರು ದೇವಸ್ಥಾನದ ಆವರಣದಲ್ಲಿ ಉಪಸ್ಥಿತರಿದ್ದರು.

ಸದ್ಯದಲ್ಲಿಯೇ ಪ್ರಾರಂಭ
ನೆಕ್ರಾಜೆ ಗೋಪಾಲಕೃಷ್ಣ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿಯ ಕೆಲಸ ಸದ‌್ಯದಲ್ಲಿಯೇ ಪ್ರಾರಂಭವಾಗಲಿದ್ದು ಶಿಲೆಯನ್ನು ಕ್ಷೇತ್ರಕ್ಕೆ ತಲುಪಿಸಲಾಗಿದೆ. ನೆಕ್ರಾಜೆಯ ಗ್ರಾಮದ ದೇವಸ್ಥಾನ ವಾಗಿದ್ದು ಸಂತಾನ ಗೋಪಾಲಕೃಷ್ಣ ಎಂದೇ ಖ್ಯಾತಿ ಪಡೆದಿದೆ. ಅತಿ ಶೀಘ್ರದಲ್ಲಿ ಕೆಲಸವನ್ನು ಪೂರ್ತಿಗೊಳಿಸುವ ಯೋಜನೆ ಹಾಕಲಾಗಿದ್ದು ಭಕ್ತ ಜನರ ಸಹಕಾರದಿಂದ ಅದು ಸಾಧ್ಯವಾಗಲಿದೆ.ಶಾಶ್ವತ ಚಪ್ಪರ, ಸುಸಜ್ಜಿತ ಅಡುಗೆ ಶಾಲೆ, ನೆಲಕ್ಕೆ ಹಾಸುಗಲ್ಲು, ಕಾರ್ಯಾಲಯ, ಶಾಶ್ವತ ವೇದಿಕೆ, ನೀರಿನ ಟ್ಯಾಂಕ್‌, ಶೌಚಾಲಯ ಕೆಲಸಗಳು ನಡೆಯಬೇಕಿದೆ.
ಗಣೇಶ ವತ್ಸ ನೆಕ್ರಾಜೆ
ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ

LEAVE A REPLY

Please enter your comment!
Please enter your name here