ಪಡುವನ್ನೂರು : ಬದಿನಾರು ಶ್ರೀ ಪೂಮಾಣಿ-ಕಿನ್ನಿಮಾಣಿ ದೈವಸ್ಥಾನದಲ್ಲಿ ಮಾ. 11ರಂದು ಪೂಮಾಣಿ ದೈವದ ನೇಮ ನಡೆಯಿತು.
ದೈವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರವಿರಾಜ ಶೆಟ್ಟಿ ಅಣಿಲೆ, ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕೇಸರ ಸಂಜೀವ ರೈ ಕೆ.ಪಿ., ಗಣೇಶ್ ಭಟ್ ಬಿರ್ಣೋಡಿ, ದಯಾ ವಿ. ರೈ ಬೆಳ್ಳಿಪಾಡಿ, ತಿಲೋತ್ತಮ ಎಸ್. ರೈ ಕೆಳಗಿನಮನೆ, ಬಾಬು ರೈ ಮೂಡಾಯೂರು, ರಮೇಶ್ ಸಾಂತ್ಯ, ಜಯಪ್ರಕಾಶ್ ರೈ ನೂಜಿಬೈಲು, ಗಂಗಾಧರ ರೈ ಎನ್.ಜಿ., ಶ್ರೀನಿವಾಸ ಭಟ್ ಚಂದುಕೂಡ್ಲ, ಅರುಣಾ ರವಿರಾಜ ಶೆಟ್ಟಿ, ಬಾಲಕೃಷ್ಣ ರೈ ಕುದಾRಡಿ, ಜಯಂತ ರೈ ಕುದಾRಡಿ, ಕೃಷ್ಣ ರೈ ಕುದಾRಡಿ, ಅನಂತ್ ರೈ ಮೂಡಾಯೂರು, ಜನಾರ್ದನ ಪದಡ್ಕ, ಶಿವರಾಮ ರೈ ಎಂ., ಪುರಂದರ ರೈ ಕುದಾRಡಿ, ಲಕ್ಷ್ಮೀನಾರಾಯಣ ರಾವ್ ಪಡುಮಲೆ, ರಾಮಣ್ಣ ಗೌಡ ಬಸವನ ಹಿತ್ತಿಲು, ರಾಮಣ್ಣ ಗೌಡ ಕರ್ಪುಡಿಕಾನ, ಭಾಸ್ಕರ ಗೌಡ ದೊಡ್ಡಮನೆ, ಚಂದ್ರಶೇಖರ ಆಳ್ವ ಗಿರಿಮನೆ, ಜಯರಾಜ್ ಶೆಟ್ಟಿ ಅಣಿಲೆ, ಗುರುಪ್ರಸಾದ್ ರೈ ಕುದಾRಡಿ, ಬಾಲು¤ ಡಿ’ಸೋಜಾ, ವಿಜಯಲಕ್ಷ್ಮೀ ಮೇಗಿನಮನೆ, ದೇವಿಪ್ರಸಾದ್ ಕೆ.ಸಿ. ರಾಜೇಶ್ ರೈ ಮೇಗಿನಮನೆ, ವಿಶ್ವನಾಥ ಪೂಜಾರಿ ಪೂಜಾರಿ ಹಾಗೂ ಸಮಿತಿ ಸದಸ್ಯರು, ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.
ಇಂದು ವ್ಯಾಘ್ರಚಾಮುಂಡಿ ನೇಮ
ಬದಿನಾರು ಶ್ರೀ ಪೂಮಾಣಿ-ಕಿನ್ನಿಮಾಣಿ ದೈವಸ್ಥಾನದಲ್ಲಿ ವ್ಯಾಘ್ರ ಚಾಮುಂಡಿ (ರಾಜನ್ ದೈವ) ನೇಮ ಮಾ. 12ರಂದು ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಬೆಳ್ಳಿಪ್ಪಾಡಿ ಪಡುಮಲೆ ಮನೆಯಿಂದ ಮಲರಾಯ ದೈವದ ಭಂಡಾರ ತರುವುದು, ಬಳಿಕ ಮಲರಾಯ ದೈವದ ನೇಮ, ಮಧ್ಯಾಹ್ನ12ರಿಂದ ವ್ಯಾಘ್ರ ಚಾಮುಂಡಿ (ರಾಜನ್ ದೈವ) ನೇಮ, ಸಂಜೆ 5ರಿಂದ ಕನ್ನಡ್ಕ ತರವಾಡು ದೈವಸ್ಥಾನದಿಂದ ರುದ್ರಚಾಮುಂಡಿ ದೈವದ ಭಂಡಾರ ತರುವುದು, ದೈವಗಳು ದೊಡ್ಡಮನೆಗೆ ಅವಭೃಥ ಸ್ನಾನಕ್ಕೆ ಹೊರಡುವುದು, ಕಟ್ಟೆ ಪೂಜೆ, ಧ್ವಜಾವರೋಹಣ, ರುದ್ರಾಂಡಿ ದೈವದ ನೇಮ, ನವಕಾಭಿಷೇಕ, ಮಂತ್ರಾಕ್ಷತೆ, ರಾತ್ರಿ 12ರಿಂದ ಗುಳಿಗ ನೇಮ. ಸಂಜೆ 7ರಿಂದ ಸಮಾರೋಪ ಸಮಾರಂಭ. ರಾತ್ರಿ 9ರಿಂದ ಜಯಂತ ನಡುಬೈಲು ಸಂಚಾಲಕತ್ವದ ಶೇಖರ ಬೆಳ್ಳಿಪ್ಪಾಡಿ ಸಾರಥ್ಯದ ಬದ್ಕೆರೆ ಕಲ್ಪಿ ಖ್ಯಾತಿಯ “ಸಂಸಾರ ಕಲಾವಿದರ್’ ಪುತ್ತೂರು ಅಭಿನಯಿಸುವ ಸಾಮಾಜಿಕ ಹಾಸ್ಯಮಯ ನಾಟಕ “ಒವುಲಾ ಒರಿವುಜಿ’ ಪ್ರದರ್ಶನವಿದೆ.