Home ಧಾರ್ಮಿಕ ಸುದ್ದಿ ಬಡಗನ್ನೂರು: ಮೃತ್ಯುಂಜಯ ಹೋಮ

ಬಡಗನ್ನೂರು: ಮೃತ್ಯುಂಜಯ ಹೋಮ

1589
0
SHARE

ಬಡಗನ್ನೂರು : ಕೌಡಿಚ್ಚಾರು- ಅರಿಯಡ್ಕದ ಶ್ರೀಕೃಷ್ಣ ಭಜನ ಮಂದಿರದ ಜೀರ್ಣೋದ್ಧಾರದ ಅಂಗವಾಗಿ ಸಾಮೂಹಿಕ ಮೃತ್ಯುಂಜಯ ಹೋಮ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಅವರ ನೇತೃತ್ವದಲ್ಲಿ ರವಿವಾರ ನಡೆಯಿತು.

ಬೆಳಗ್ಗೆ 9 ಗಂಟೆಗೆ ಸಾಮೂಹಿಕ ಪ್ರಾರ್ಥನೆ ಬಳಿಕ ಪೂಜೆ ಆರಂಭಗೊಂಡಿತು. ಅಪರಾಹ್ನ 12.30ಕ್ಕೆ ಹೋಮದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಬಳಿಕ ಕೌಡಿಚ್ಚಾರು ಸಾರ್ವಜನಿಕ ನಾಗ ದೇವರ ಸಾನ್ನಿಧ್ಯದಲ್ಲಿ ಅನುಜ್ಞಾ ಪ್ರಾರ್ಥನೆ ನಡೆಯಿತು.

ಭಜನ ಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷ ಚಿಕ್ಕಪ್ಪ ನಾಯಿಕ್‌, ಕಾರ್ಯದರ್ಶಿ ರಾಜೀವ ರೈ ಕುತ್ಯಾಡಿ, ಜತೆ ಕಾರ್ಯದರ್ಶಿ ಸದಾಶಿವ ಮಣಿಯಾಣಿ ಕುತ್ಯಾಡಿ, ಶಾಖಾಧಿಕಾರಿ ಅಮ್ಮಣ್ಣ ರೈ ಪಾಪೆಮಜಲು, ಭಜನ ಮಂದಿರದ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಮಂಡಳಿ ಸದಸ್ಯರಿಂದ ಭಜನ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here