ಬಂಟ್ವಾಳ: ಬಡ್ಡಕಟ್ಟೆ ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ ಭಜನ ಮಂದಿರದಲ್ಲಿ ಗುರುಪೂರ್ಣಿಮೆ ಮತ್ತು ನಿತ್ಯಾನಂದ ಸ್ವಾಮಿಯವರ ಪ್ರತಿಷ್ಠೆಯ 58ನೇ ವರ್ಷದ ಆರಾಧನಾ ಮಹೋತ್ಸವ ಜು. 16ರಂದು ನಡೆಯಿತು.
ಬೆಳಗ್ಗೆ 9ಕ್ಕೆ ಗುರುಶಿಷ್ಯರ ಮೂರ್ತಿಗಳಿಗೆ ಸಾರ್ವಜನಿಕರಿಂದ ಸೀಯಾಳ ಅಭಿಷೇಕ, ಅನಂತರ ಮಧ್ಯಾಹ್ನದ ತನಕ ನಿರಂತರ ಭಜನೆ, ಮಧ್ಯಾಹ್ನ ವಿಶೇಷ ಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಆಡಳಿತ ಮಂಡಳಿ ಅಧ್ಯಕ್ಷ ಯೋಗೀಶ ಸಪಲ್ಯ ಮತ್ತು ಸಮಿತಿ ಪದಾಧಿಕಾರಿಗಳು, ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.