Home ಧಾರ್ಮಿಕ ಕಾರ್ಯಕ್ರಮ ಬಡ್ತಿಮಕ್ಕಿ: ಧಾರ್ಮಿಕ ಕಾರ್ಯಗಳು

ಬಡ್ತಿಮಕ್ಕಿ: ಧಾರ್ಮಿಕ ಕಾರ್ಯಗಳು

1599
0
SHARE

ಬಸ್ರೂರು: ಬಳ್ಕೂರು ಬಡ್ತಿಮಕ್ಕಿಯಲ್ಲಿ ಡಾ| ಗೋಪಾಲ ಆಚಾರ್ಯ ಮತ್ತು ಕುಟುಂಬಸ್ಥರು ನಡೆಸುತ್ತಿರುವ ಚತುಃಪವಿತ್ರ ನಾಗಮಂಡಲದ ಪ್ರಯುಕ್ತ ಎ. 22ರಂದು ರವಿವಾರ ಮಧ್ಯಾಹ್ನ ಫಲಾ ಪ್ರಾರ್ಥನೆ, ವಾಚನ ಮಾತೃಕಾ ಪೂಜೆ, ಕೃಚ್ಪಾಚರಣೆ ಮಹಾಸಂಕಲ್ಪ, ಯತ್ವಿಗ್ವರಣೆ, ಗುರು-ಗಣಪತಿ ಪೂಜಾ ಪುಣ್ಯಾಹ, ಸ್ನಪನಾಧಿವಾಸ ಹೋಮ, ವಟು, ಬ್ರಾಹ್ಮಣ ಆರಾಧನೆ, ಕನ್ನಿಕಾ, ಸುಹಾಸಿನಿ, ದಂಪತಿ, ಆಚಾರ್ಯ ಪೂಜೆ, ಮಹಾಪೂಜೆ, ಸಂದರ್ಶನ ಅನಂತರ ನಾಗ ಪಾತ್ರಿ ವೇ|ಮೂ| ರವಿರಾಜ್‌ ಭಟ್‌ ಅಂಪಾರು ಅವರಿಂದ ಪಲ್ಲಸೇವೆ ನಡೆಯಿತು.

ಪ್ರಧಾನ ಪುರೋಹಿತ ವೆಂಕಟೇಶ ಅಡಿಗ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ನಡೆದಿದ್ದು, ಕಾರ್ಯಕ್ರಮಗಳ ನೇತೃತ್ವವನ್ನು ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಅವರು ವಹಿಸಿದ್ದರು. ಬಳಿಕ ಶ್ರೀ ಗುರು ಪ್ರಸಾದಿತ ಯಕ್ಷಗಾನ ಮೇಳ ಸಾಲಿಗ್ರಾಮದ ಕಲಾವಿದರಿಂದ ಮಹಾಮಂತ್ರಿ ದುಷ್ಟಬುದ್ಧಿ ಯಕ್ಷಗಾನ ನಡೆಯಿತು.

LEAVE A REPLY

Please enter your comment!
Please enter your name here