Home ಧಾರ್ಮಿಕ ಸುದ್ದಿ ಬಡಗು ಬಸದಿ ರಥೋತ್ಸವ

ಬಡಗು ಬಸದಿ ರಥೋತ್ಸವ

1329
0
SHARE

ಮೂಡುಬಿದಿರೆ: ಬಡಗು ಬಸದಿ ಹಗಲು ರಥೋತ್ಸವವು ಶ್ರೀ ಜೈನ ಮಠಾಧೀಶ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಯವರ ಹಿರಿತನದಲ್ಲಿ ಜರಗಿತು. ಈ ಸಂದರ್ಭದಲ್ಲಿ ನಾಂದಿಣಿ ಶ್ರೀ ಜೈನಮಠದ ನೂತನ ಭಟ್ಟಾರಕ ಸ್ವಾಮೀಜಿಯವರ ಮೂಡುಬಿದಿರೆ ಪುರಪ್ರವೇಶ ಕಾರ್ಯಕ್ರಮ ಸಂಪನ್ನಗೊಂಡಿತು. ಮಧ್ಯಾಹ್ನ 12.45ಕ್ಕೆ ಭ| ಚಂದ್ರಪ್ರಭ ಸ್ವಾಮಿಯ ರಥಾರೋಹಣವಾಗಿ ಶ್ರಾವಕ ಶ್ರಾವಿಕೆಯರು ರಥವನ್ನು ಎಳೆದರು.

ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುಧೇಶ್‌ ಕುಮಾರ್‌, ಆನಡ್ಕ ದಿನೇಶ್‌ ಕುಮಾರ್‌, ಡಾ| ಎಸ್‌.ಪಿ. ವಿದ್ಯಾಕುಮಾರ್‌, ವೀರೇಂದ್ರ ಕುಮಾರ್‌, ಭಾಸ್ಕರ ಕಟ್ಟೇಮಾರ್‌, ಭರತ್‌ಕುಮಾರ್‌, ಕಿಶೋರ್‌, ಸಂಜಯಂತ ಕುಮಾರ್‌, ಅನಂತ್ರಾಜ್‌ ಜೈನ್‌, ಗುಣಪಾಲ್‌ ಜೈನ್‌, ಮಠದ ವ್ಯವಸ್ಥಾಪಕ ಶಂಭವ ಕುಮಾರ್‌, ವೀರೇಂದ್ರ ಕಾಂಬ್ಲಿ, ನಿರಂಜನ್‌ ಹಾಗೂ ಜೈನ ಮಹಿಳಾ ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here