Home ಧಾರ್ಮಿಕ ಸುದ್ದಿ ಬಡಗನ್ನೂರು: ಕಾವು ಪಂಚಲಿಂಗೇಶ್ವರ ಜಾತ್ರೆ ಸಂಪನ್ನ

ಬಡಗನ್ನೂರು: ಕಾವು ಪಂಚಲಿಂಗೇಶ್ವರ ಜಾತ್ರೆ ಸಂಪನ್ನ

1442
0
SHARE

ಬಡಗನ್ನೂರು : ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ ಮಾ. 23ರಿಂದ ಎ. 1ರ ವರೆಗೆ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರ ನೇತೃತ್ವದಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಎ. 1ರಂದು ಸಂಜೆ ದೇವಸ್ಥಾನದ ಅವರಣದಲ್ಲಿ ಗುಳಿಗ ದೈವದ ನೇಮ ನಡೆದು, ಜಾತ್ರೆ ಸಮಾಪನಗೊಂಡಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದಿವ್ಯನಾಥ ಶೆಟ್ಟಿ ಕಾವು, ಶ್ರೀ ದಂಡನಾಯಕ ದೈವಸ್ಥಾನದ ಆಡಳಿತ ಮೊಕ್ತೇಸರ ನನ್ಯ ಅಚ್ಯುತ ಮೂಡೆತ್ತಾಯ, ಸದಸ್ಯರಾದ ಶಿವಪ್ರಸಾದ್‌ ಕಡಂಬೊಳಿತ್ತಾಯ, ಸುಬ್ರಾಯ ಬಲ್ಯಾಯ ಮದ್ಲ, ಮೋನಪ್ಪ ಪೂಜಾರಿ ಕೆ., ಗೋಪಾಲ ಪಾಟಾಳಿ, ಗಣೇಶ್‌ ಮಾಣಿಯಡ್ಕ, ಚಿನ್ನಮ್ಮ, ತಿಮ್ಮಯ್ಯ, ದರ್ಶನ ಪಾತ್ರಿ ರಾಮಚಂದ್ರ, ಅರಿಯಡ್ಕ ಗ್ರಾಮ ಪಂಚಾಯತ್‌ ಸದಸ್ಯ ರವೀಂದ್ರ ಪೂಜಾರಿ, ರಾಮದಾಸ್‌ ರೈ ಮದ್ಲ, ಶರತ್‌ ಕುಮಾರ್‌ ರೈ, ರಾಮಚಂದ್ರ ರೈ, ಚಂದ್ರಶೇಖರ ನಿಧಿಮುಂಡ, ಬಾಲಕೃಷ್ಣ ಕೆದಿಲಾಯ, ಶ್ರೀಧರ ರಾವ್‌ ನಿಧಿಮುಂಡ, ನರಸಿಂಹ ಶರ್ಮ, ಜಗನ್ನಾಥ ರೈ ಗುತ್ತು, ಗಂಗಾಧರ ಗೌಡ ಚಾಕೋಟೆ, ಮಹೇಶ್‌ ರೈ ಅಂಕೋತಿಮಾರ್‌, ಹರಿ ಪ್ರಸಾದ್‌ ರೈ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here