ಬಡಗನ್ನೂರು : ದರ್ಬೆತ್ತಡ್ಕ ಶ್ರೀ ಅಯ್ಯಪ್ಪ ಭಜನ ಮಂದಿರ ಮತ್ತು ಶ್ರೀ ರಕ್ತೇಶ್ವರಿ ದೈವದ ಕಟ್ಟೆಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ಗುರುವಾರ ಬೆಳಗ್ಗೆ ಗಣಪತಿ ಪ್ರಾರ್ಥನೆ, ಉಗ್ರಾಣ ಮುಹೂರ್ತ ನಡೆದು ದರ್ಬೆತ್ತಡ್ಕ ಶಾಲಾ ಬಳಿಯಿಂದ ಹಸುರುವಾಣಿ ಹೊರೆಕಾಣಿಕೆಯ ಶೋಭಾಯಾತ್ರೆ ನಡೆಯಿತು.
ಪ್ರಗತಿಪರ ಕೃಷಿಕ ಮೋಹನದಾಸ್ ರೈ ಕೊಡೆಂಚಾರ್ ಶೋಭಾಯಾತ್ರೆಯನ್ನು ಉದ್ಘಾಟಿಸಿದರು. ಅನಂತರ ದರ್ಬೆತ್ತಡ್ಕ, ನೀರ್ಪಾಡಿ, ಅಜಲಡ್ಕ, ಉಪ್ಪಳಿಗೆ, ಚೆಲ್ಯಡ್ಕ, ಕೈಕಾರ, ಸಂಟ್ಯಾರು, ಪರ್ಪುಂಜ, ಕೊಯಿಲತ್ತಡ್ಕ, ಕುಂಬ್ರ, ಶೇಖಮಲೆ, ಮುಡಾಲ, ದರ್ಬೆ ಮೂಲಕ ಭಜನ ಮಂದಿರಕ್ಕೆ ಹಾಗೂ ಬೆಟ್ಟಂಪಾಡಿ, ರೆಂಜ, ಇರ್ದೆ, ಅಜ್ಜಿಕಲ್ಲು, ಗುಮ್ಮಟೆಗದ್ದೆ, ಬೈರೋಡಿ, ನಿಡ್ಪಳ್ಳಿ, ಮುಡಿಪಿನಡ್ಕ, ಪೆರಿಗೇರಿ, ಕುರಿಂಜ, ಕೌಡಿಚ್ಚಾರು ಮುಂತಾದ ಕಡೆಗಳಿಂದ ಶೇಖಮಲೆಯಲ್ಲಿ ಸೇರಿ ಶೋಭಾಯಾತ್ರೆಯಲ್ಲಿ ಬಂದು ಉಗ್ರಾಣ ತುಂಬಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಅಧ್ಯಕ್ಷ ಬಾಲಕೃಷ್ಣ ರೈ ಸೇರ್ತಾಜೆ, ಉಪಾಧ್ಯಕ್ಷ ಶ್ರೀಧರ ಮಣಿಯಾಣಿ ಪೊನ್ನೆತ್ತಳ, ಜತೆ ಕಾರ್ಯದರ್ಶಿ ವಿನೋದ್ ಮಣಿಯಾಣಿ ಕುಂಟಾಪು, ಪ್ರಧಾನ ಸಂಚಾಲಕ ನಾಗೇಶ್ ಗೌಡ ಕೊಪ್ಪಳ, ಕೋಶಾಧಿಕಾರಿ ಜಗನ್ನಾಥ ರೈ ಸೇರ್ತಾಜೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರಿನಾರಾಯಣ ಶಾಂತಿವನ, ಉಪಾಧ್ಯಕ್ಷ ಬಾಬು ದೇವಗಿರಿ, ಚೆನ್ನಪ್ಪ ಗೌಡ ಕುದ್ಕಲ್, ಕಾರ್ಯದರ್ಶಿ ವಾಸು ಮಣಿಯಾಣಿ ಕುರಿಂಜ, ಜತೆ ಕಾರ್ಯದರ್ಶಿ ಸತೀಶ್ ಕೊಪ್ಪಳ, ಕೋಶಾಧಿಕಾರಿ ಮಹಾಲಿಂಗ ಮಣಿಯಾಣಿ ಕುಂಟಾಪು, ನಿಡ³ಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ನಾಗೇಶ್ ಗೌಡ ಪುಳಿತ್ತಡಿ, ಕಾರ್ಯದರ್ಶಿ ನಾರಾಯಣ ರೈ ಕೊಪ್ಪಳ, ಒಳಮೊಗ್ರು ಗ್ರಾ.ಪಂ. ಅಧ್ಯಕ್ಷ ಯತಿರಾಜ್ ರೈ ನೀರ್ಪಾಡಿ ಹಾಗೂ ಜೀರ್ಣೋದ್ಧಾರ ಸಮಿತಿ, ಪುನಃ ಪ್ರತಿಷ್ಠಾಪನ ಸಮಿತಿ ಸದಸ್ಯರು, ಊರ ಪರವೂರ ಭಕ್ತರು ಪಾಲ್ಗೊಂಡರು.
ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾಯರದರ್ಶಿ ಪ್ರಕಾಶ್ಚಂದ್ರ ರೈ ಕೈಕಾರ ಸ್ವಾಗತಿಸಿದರು. ಹಸುರು ಹೊರೆಕಾಣಿಕೆ ಸಮರ್ಪಣೆ ಬಳಿಕ ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.