Home ಧಾರ್ಮಿಕ ಸುದ್ದಿ ಬಾಲಯೇಸು ಮೂರ್ತಿ ಪ್ರತಿಷಾಪನೆ

ಬಾಲಯೇಸು ಮೂರ್ತಿ ಪ್ರತಿಷಾಪನೆ

201
0
SHARE

ಬಂಟ್ವಾಳ : ಬಾಲಯೇಸು ಎಲ್ಲರನ್ನು ಹರಸಲಿ. ಈ ಮೂರ್ತಿಯ ಗ್ರೊಟ್ಟೊ ನಿರ್ಮಾಣಕ್ಕಾಗಿ ಶ್ರಮಿಸಿದವರಿಗೆ ಬಾಲಯೇಸು ಒಳಿತನ್ನು ಕರುಣಿಸಲಿ ಎಂದು ವಿಶ್ರಾಂತ ಬಿಷಪ್‌ ರೈ| ರೆ| ಡಾ| ಅಲೋಶಿ ಯಸ್‌ ಪಾವ್ಲ ಡಿ’ಸೋಜಾ ಹೇಳಿದರು. ಅವರು ಫೆ. 24ರಂದು ಮೊಡಂಕಾಪು ಬಾಲಯೇಸು ಚರ್ಚ್‌ನಲ್ಲಿ ಬಾಲಯೇಸು ಮೂರ್ತಿಯನ್ನು ಪ್ರತಿಷ್ಠಾಪಿಸಿ, ಬಲಿ ಪೂಜೆ ನೆರವೇರಿಸಿ, ಭಕ್ತರನ್ನು ಹರಸಿದರು.

ಚರ್ಚ್‌ನ ನೂತನ ವೆಬ್‌ಸೈಟ್‌ ಅನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಬಿಷಪರನ್ನು ಸಮ್ಮಾನಿಸಲಾಯಿತು. ಪಾಲನ ಮಂಡಳಿಯ ಉಪಾಧ್ಯಕ್ಷ ಸಂದೀಪ್‌ ಮಿನೇಜಸ್‌, ಕಾರ್ಯದರ್ಶಿ ರಿಚಾರ್ಡ್‌ ಪಾಸ್ಕಲ್‌ ಡಿ’ಸೋಜಾ, ಸಹಾಯಕ ಧರ್ಮಗುರು ವಂ| ಅಶ್ವಿ‌ನ್‌ ಕ್ರಾಸ್ತಾ ಉಪಸ್ಥಿತರಿದ್ದರು. ಚರ್ಚ್‌ನ ಪ್ರಧಾನ ಧರ್ಮಗುರು ವಂ| ವಾಲ್ಟರ್‌ ಡಿ’ಮೆಲ್ಲೊ ಸಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here