Home ಧಾರ್ಮಿಕ ಸುದ್ದಿ ಅಜ್ಜಾವರ: ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಜಾತ್ರೆ

ಅಜ್ಜಾವರ: ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಜಾತ್ರೆ

2449
0
SHARE

ಸುಳ್ಯ : ಅಜ್ಜಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಎ. 4ರಿಂದ 9ರ ತನಕ ಜಾತ್ರೆ ಮಹೋತ್ಸವ ನಡೆಯಿತು. ಉಗ್ರಾಣ ಮುಹೂರ್ತ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು.

ಎ. 5ರಂದು ಬೆಳಗ್ಗೆ ನವಕ, ಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ, ಅನ್ನಸಂತಪ‌ìಣೆ ನಡೆಯಿತು. ಸ್ಥಳೀಯ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿ ಸೌರಭ ಪ್ರದರ್ಶನಗೊಂಡಿತ್ತು. ರಾತ್ರಿ ಶ್ರೀ ಭೂತಬಲಿ, ದೈವಗಳ ತಂಬಿಲ, ಅನ್ನ ಸಂತರ್ಪಣೆ, ಸಿಡಿಮದ್ದಿನ ಪ್ರದರ್ಶನ ನಡೆಯಿತು. ಎ. 6ರಂದು ದರ್ಶನ ಬಲಿ, ಬಟ್ಟಲು ಕಾಣಿಕೆ, ಗಡಿಪ್ರಸಾದ ಮಂತ್ರಾಕ್ಷತೆ, ಸಂಪ್ರೋಕ್ಷಣೆ, ಮಧ್ಯಾಹ್ನ ಭಕ್ತಿ, ಭಾವ, ಜಾನಪದ ಗೀತೆಗಳ ಸ್ಪರ್ಧೆ, ಅನ್ನ ಸಂತರ್ಪಣೆ ನಡೆಯಿತು.

ಎ. 8ರಂದು ರಾತ್ರಿ ಧಾರ್ಮಿಕ ಕಾರ್ಯಕ್ರಮದ ಅನಂತರ ಯಕ್ಷ ಗಾನ ಬಯಲಾಟ ಪ್ರದರ್ಶನ ಗೊಂಡಿತ್ತು. ನೂರಾರು ಭಕ್ತರು ಪಾಲ್ಗೊಂಡಿದ್ದರು. ಎ. 9ರಂದು ಶ್ರೀ ವಿಷ್ಣುಮೂರ್ತಿ ದೈವದ ಕೋಲ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here