Home ಧಾರ್ಮಿಕ ಸುದ್ದಿ ಆತೂರು ಸದಾಶಿವ ಮಹಾಗಣಪತಿ ದೇಗುಲದಲ್ಲಿ ಪ್ರತಿಷ್ಠಾ ಮಹೋತ್ಸವ

ಆತೂರು ಸದಾಶಿವ ಮಹಾಗಣಪತಿ ದೇಗುಲದಲ್ಲಿ ಪ್ರತಿಷ್ಠಾ ಮಹೋತ್ಸವ

1165
0
SHARE

ಆಲಂಕಾರು : ಕಡಬ ತಾಲೂಕಿನ ಕೊçಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಶುಕ್ರವಾರ ದೇವರ ಪ್ರತಿಷ್ಠಾ ಮಹೋತ್ಸವ ನಡೆಯಿತು. ಬೆಳಗ್ಗೆ ಗಣಪತಿ ಹೋಮ, ಪಂಚ ವಿಂಶತಿ, ಕಲಶಾಭಿಷೇಕ, ಬಳಿಕ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಶ್ರೀ ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷಾ ಬಲಿ, ಕಲಶಾಭಿಷೇಕ, ನಾಗ ತಂಬಿಲ, ದೈವಗಳ ಸನ್ನಿಧಿಯಲ್ಲಿ ಕಲಶಾಭಿಷೇಕ, ತಂಬಿಲ ಹಾಗೂ ಶ್ರೀ ಸದಾಶಿವ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.

ಕೋಲ ನೂಜಿ ತಿರುಮಲೇಶ್ವರ ಭಟ್‌ ಹಾಗೂ ಮನೆಯವರ ಸೇವಾರ್ಥ ಸದಾಶಿವ ದೇವರ ಉತ್ಸವ ಮೂರ್ತಿಗೆ ರಜತ ಕವಚ ಸಮರ್ಪಣೆ ನಡೆಯಿತು.  ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುನೀತ್‌ರಾಜ್‌ ಶೆಟ್ಟಿ, ಸದಸ್ಯರಾದ ವಿಷ್ಣುಮೂರ್ತಿ ಬಡಕ್ಕಿಲ್ಲಾಯ, ಪುರಂದರ ರೈ ಆರಾÌರ, ಬಿ.ಕೆ. ಚಂದ್ರಶೇಖರ ಕಲಾಯಿ, ಎ. ನಾರಾಯಣ ನಾಯ್ಕ ಬೊಮ್ಮಿಂಡಿ, ಬಿ. ಚಂದ್ರಶೇಖರ ಗೌಡ ತೋಟ ಹಾಗೂ ಉತ್ಸವ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here