Home ಧಾರ್ಮಿಕ ಸುದ್ದಿ ಅತ್ತೂರು: ಸುವರ್ಣ ಮೂರ್ತಿ ಮೆರವಣಿಗೆ

ಅತ್ತೂರು: ಸುವರ್ಣ ಮೂರ್ತಿ ಮೆರವಣಿಗೆ

1872
0
SHARE

ಅತ್ತೂರು : ಇಲ್ಲಿನ ಶ್ರೀ ಅರಸು ಕುಂಜಿರಾಯರ ಭಂಡಾರಸ್ಥಾನದಲ್ಲಿ ಶ್ರೀ ಅರಸು ಕುಂಜಿರಾಯರ ಪುನಃ ಪ್ರತಿಷ್ಠೆ ಹಾಗೂ ಕಲಶಾಭಿಷೇಕದ ಅಂಗವಾಗಿ ಮಾ. 10 ರಂದು ಪಕ್ಷಿಕೆರೆ ಪೇಟೆಯಿಂದ ಅತ್ತೂರು ಶ್ರೀ ಅರಸು ಕುಂಜಿರಾಯರ ಸುವರ್ಣ ಮೂರ್ತಿ, ಸುವರ್ಣ ಗಜ, ಸುವರ್ಣ ಪೀಠ, ರಜತ ಪಲ್ಲಕಿ ಸಹಿತ ಇತರ ಆಭರಣಗಳ ಭವ್ಯ ಮೆರವಣಿಗೆ ನಡೆಯಿತು.

ಅತ್ತೂರು ಶ್ರೀ ಅರಸು ಕುಂಜಿರಾಯರ ದೈವಸ್ಥಾನದ ಅಧ್ಯಕ್ಷ ಚರಣ್‌ ಜೆ. ಶೆಟ್ಟಿ ಅತ್ತೂರು ಕೊಜಪಾಡಿಬಾಳಿಕೆ, ಟ್ರಸ್ಟ್‌ ಅಧ್ಯಕ್ಷ ರಾಜೇಂದ್ರ ಕೆ. ಶೆಟ್ಟಿ ಕುಡ್ತಿಮಾರು ಗುತ್ತು, ಶಂಭು ಮುಕ್ಕಾಲ್ದಿ ಭಂಡಾರಮನೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here