ಆಲಂಕಾರು : ಕಡಬ ತಾಲೂಕಿನ ಆತೂರು ಸದಾಶಿವ ದೇವಸ್ಥಾನದ ವಠಾರದಲ್ಲಿ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಭಾಭವನಕ್ಕೆ ಶಿಲಾನ್ಯಾಸ ಶನಿವಾರ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಧಾರ್ಮಿಕ ಪರಿಷತ್ ಸದಸ್ಯ ಎನ್.ಕೆ. ಜಗನ್ನಿವಾಸ ರಾವ್ ಮಾತನಾಡಿ, ಸಮಾಜ ಸನ್ಮಾರ್ಗದಲ್ಲಿ ನಡೆಯಬೇಕಾದರೆ ಧಾರ್ಮಿಕ ಕ್ಷೇತ್ರಗಳು ಅಗತ್ಯ. ಧರ್ಮ ಉಳಿಯಬೇಕಾದರೆ ದೇವಸ್ಥಾನಗಳು ಅಭಿವೃದ್ಧಿಯಾಗಬೇಕು. ಇದರಿಂದ ನಮ್ಮ ಮಕ್ಕಳಿಗೂ ಸಂಸ್ಕಾರ ಸಿಗುತ್ತದೆ. ಸುಸ್ಥಿರ ಸಮಾಜ ನಿರ್ಮಾಣವಾಗುತ್ತದೆ. ಧಾರ್ಮಿಕ ವಿಚಾರಗಳಲ್ಲಿ ನಾವು ಶಿಸ್ತನ್ನು ಅಳವಡಿಸಿಕೊಳ್ಳಬೇಕು ಎಂದರು.
ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿ ಅವರು ಶಿಲಾನ್ಯಾಸ ನೆರವೇರಿಸಿದರು. ಮಂಗಳೂರಿನ ಉದ್ಯಮಿ ಪ್ರದೀಪ್ ಕುಮಾರ್ ಶೆಟ್ಟಿ ಅಂಬಾ ಮಾತನಾಡಿ, ಕಟ್ಟಡ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ಭರವಸೆ ನೀಡಿದರು.
ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುನೀತ್ರಾಜ್ ಶೆಟ್ಟಿ ಆರಾÌರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ತಹಶಿಲ್ದಾರ್ ಮೋಹನ್ ರಾವ್ ಆತೂರು ಶುಭ ಹಾರೈಸಿದರು. ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಪುರಂದರ ರೈ ಆರಾÌರ, ಬಿ.ಕೆ. ಚಂದ್ರಶೇಖರ್ ಕಲಾಯಿ, ಬಿ. ಚಂದ್ರಶೇಖರ ಗೌಡ ತೋಟ, ಪುಷ್ಪಾವತಿ ಪುರಂದರ ಗೌಡ ಪಟ್ಟೆ, ಕೆ. ರಾಧಿಕಾ ಸುಬ್ರಹ್ಮಣ್ಯ ಗೌಡ ವಳಕಡಮ, ದೇವಸ್ಥಾನದ ಪವಿತ್ರಪಾಣಿ ವೆಂಕಟ್ರಮಣ ಕುದುರೆತ್ತಾಯ, ಅಭ್ಯುದಯ ಸಮಿತಿಯ ಅಧ್ಯಕ್ಷ ಸೋಮನಾಥ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಲಿಂಗಪ್ಪ ಗೌಡ ಕಡೆಂಬ್ಯಾಲು ಪ್ರಸ್ತಾವನೆಗೈದು ಸ್ವಾಗತಿಸಿದರು. ಉತ್ಸವ ಸಮಿತಿಯ ಅಧ್ಯಕ್ಷ ಸಂತೋಷ್ ರೈ ಆರಾÌರ ವಂದಿಸಿದರು. ಕೆ.ಎಸ್. ಬಾಲಕೃಷ್ಣ ಕೊçಲ ಹಾಗೂ ಉತ್ಸವ ಸಮಿತಿ ಕಾರ್ಯದರ್ಶಿ ಸುದೀಶ್ ಪಟ್ಟೆ ಕಾರ್ಯಕ್ರಮ ನಿರೂಪಿಸಿದರು.