Home ಧಾರ್ಮಿಕ ಸುದ್ದಿ ಕದ್ರಿ ದೇವಸ್ಥಾನದಲ್ಲಿ : ಲೋಕಕಲ್ಯಾಣಾರ್ಥವಾಗಿ ಸೀಯಾಳ ಅಭಿಷೇಕ

ಕದ್ರಿ ದೇವಸ್ಥಾನದಲ್ಲಿ : ಲೋಕಕಲ್ಯಾಣಾರ್ಥವಾಗಿ ಸೀಯಾಳ ಅಭಿಷೇಕ

1562
0
SHARE

ಕದ್ರಿ: ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘ ಮಂಗಳೂರು ಇದರ ವತಿಯಿಂದ ಪುಲ್ವಾಮಾ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಯೋಧರ ಆತ್ಮ ಶಾಂತಿಗಾಗಿ ಭಾರತೀಯ ಸೇನೆಯ ಶ್ರೇಯಸ್ಸಿಗಾಗಿ ನಾಡಿನ ಸುಭೀಕ್ಷೆ ಹಾಗೂ ಲೋಕಕಲ್ಯಾಣಾರ್ಥ ರವಿವಾರ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಸೀಯಾಳ ಅಭಿಷೇಕ ಜರಗಿತು.

ಬ್ರಹ್ಮಶ್ರೀ ವಿಟ್ಠಲ ದಾಸ ತಂತ್ರಿ ಅವರು ಜೋಗಿ ಸಮಾಜದ ಈ ಸೇವೆಯು ನಾಡಿನ ಒಳಿತಿಗೆ ಪೂರಕವಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದ ಮುಖ್ಯ ಅರ್ಚಕ ರಾಮ ಅಡಿಗ ಅಭಿಷೇಕ ನಡೆಸಿಕೊಟ್ಟರು.

ಕದ್ರಿ ಆಡಳಿತ ಮಂಡಳಿ ಸದಸ್ಯ ದಿನೇಶ ದೇವಾಡಿಗ, ಮಲ್ಲಿಕಾ ಕಲಾವೃಂದದ ಅಧ್ಯಕ್ಷ ಸುಧಾಕರ ರಾವ್‌ ಪೇಜಾವರ, ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್‌ ಜೋಗಿ, ಉಪಾಧ್ಯಕ್ಷ ಪಿ. ಕೇಶವನಾಥ್‌, ಕೋಶಾಧಿಕಾರಿ ಎಚ್‌.ಕೆ. ಪುರುಷೋತ್ತಮ್‌, ಉಪ ಕಾರ್ಯದರ್ಶಿ ಎಲ್‌. ಯಶವಂತ ಕುಮಾರ್‌, ಸಂಘಟನ ಕಾರ್ಯದರ್ಶಿ ಕೆ.
ಸುಧಾಕರ, ಸದಸ್ಯರಾದ ರಾಕೇಶ್‌ ಜೋಗಿ ಉಡುಪಿ, ವಿಶ್ವನಾಥ ಬಿಜೈ, ಶಂಕರನಾಥ್‌, ಮೋಹನ್‌ ಕೊಪ್ಪಲ, ಮಹಿಳಾ ಘಟಕದ ನಮಿತಾ ಜಯರಾಮ್‌, ಸುಜಾತಾ ಮೋಹನ್‌, ಯುವ ಘಟಕದ ಅಧ್ಯಕ್ಷ ಸಚ್ಚೀಂದ್ರನಾಥ ಜೋಗಿ, ಸಮಾಜದ ಪ್ರಮುಖರಾದ ಸಾರಿಗೆ ಅ ಕಾರಿ ಜೆ.ಪಿ. ಗಂಗಾಧರ್‌, ಹರೀಶ್‌ ಕುಮಾರ್‌ ಜೋಗಿ, ಜೋಗಿ ಸಮಾಜ ಬಾಂಧವರು, ಭಕ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here