ಪುತ್ತೂರು: ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಜ. 20ರಂದು ನಡೆಯಲಿರುವ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮದ ಆಮಂತ್ರಣ ಪತ್ರಿಕೆಯನ್ನು ಪುತ್ತೂರು ನಗರದ ಮುಖ್ಯರಸ್ತೆಯಲ್ಲಿ ಜ. 17ರಂದು ವಿತರಿಸಲಾಯಿತು.
ದೈವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಅಜಿತ್ ಕುಮಾರ್ ಕಲ್ಲೇಗ, ಸದಸ್ಯರಾದ ಕೆ. ಜಿನ್ನಪ್ಪ ಗೌಡ ಕಲ್ಲೇಗ, ಸುಜಾತಾ ಕೃಷ್ಣಪ್ಪ ಪೂಜಾರಿ ಶೇವಿರೆ, ಜಾನಕಿ ಬಾಲಕೃಷ್ಣ ಮುರ, ಸಂತೋಷ್ ಕುಮಾರ್ ಶೆಟ್ಟಿ, ಪ್ರಶಾಂತ್ ಮುರ, ಸತೀಶ್ ಶೆಟ್ಟಿ ಕಲ್ಲೇಗ, ನವೀನ್ಚಂದ್ರ ನಾಯಕ್ ಕಾರ್ಜಾಲು, ನಾರಾಯಣ ಮುಗೇರ ಪೆರಿಯತ್ತೋಡಿ, ನಗರಸಭೆ ಸದಸ್ಯರಾದ ಜೀವಂಧರ್ ಜೈನ್, ವಸಂತ ಕಾರೆಕ್ಕಾಡು, ಮಾಜಿ ಸದಸ್ಯ ರಾಜೇಶ್ ಬನ್ನೂರು, ಪ್ರಮುಖರಾದ ಸಂಜೀವ ನಾಯಕ್ ಕಲ್ಲೇಗ, ಎಂ.ಬಿ. ವಿಶ್ವನಾಥ ರೈ, ಚಂದ್ರಶೇಖರ ಬಪ್ಪಳಿಗೆ, ಪಾಂಡುರಂಗ ಹೆಗ್ಡೆ, ಪ್ರವೀಣ್ ಕುಮಾರ್ ದರ್ಬೆ, ಅನಂತರಾಮ, ನಯನಾ ರೈ ನೆಲ್ಲಿಕಟ್ಟೆ, ಹರಿಣಾಕ್ಷಿ ಜೆ. ಶೆಟ್ಟಿ, ಚಂದ್ರಶೇಖರ ಗೌಡ ಕಲ್ಲೇಗ, ವಿನಯ ಕುಮಾರ್ ಕಲ್ಲೇಗ, ಉದಯ ಕುಮಾರ್, ಗಣಪತಿ ನಾಯಕ್ ಕಲ್ಲಾರೆ, ಪ್ರಶಾಂತ ಅಜೇಯ ನಗರ, ದಿನೇಶ್ ಮುರ, ಜಿನ್ನಪ್ಪ ಪೂಜಾರಿ, ನಾರಾಯಣ ಗೌಡ ಮುರ, ಪದ್ಮಾವತಿ, ಸುನೀತಾ ಮೊದಲಾದವರು ಉಪಸ್ಥಿತರಿದ್ದರು.