Home ಧಾರ್ಮಿಕ ಸುದ್ದಿ ಅಷ್ಟಬಂಧ ಸಹಸ್ರಕುಂಭಾಭಿಷೇಕ ಕುರ್ನಾಡು ಶ್ರೀ ಸೋಮನಾಥೇಶ್ವರ ದೇವಸ್ಥಾನ : ಹೊರೆಕಾಣಿಕೆ ಮೆರವಣಿಗೆ

ಅಷ್ಟಬಂಧ ಸಹಸ್ರಕುಂಭಾಭಿಷೇಕ ಕುರ್ನಾಡು ಶ್ರೀ ಸೋಮನಾಥೇಶ್ವರ ದೇವಸ್ಥಾನ : ಹೊರೆಕಾಣಿಕೆ ಮೆರವಣಿಗೆ

988
0
SHARE

ಕುರ್ನಾಡು: ಅಮ್ಮೆಂಬಳ ಕುರ್ನಾಡು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಅಷ್ಟಬಂಧ ಸಹಸ್ರಕುಂಭಾಭಿಷೇಕ ಪ್ರಯುಕ್ತ ಹೊರೆಕಾಣಿಕೆ ಮೆರವಣಿಗೆ ಬುಧವಾರ ಸಂಜೆ ನಡೆಯಿತು. ಬೋಳಿಯಾರ್‌ ಜಂಕ್ಷನ್‌ನಲ್ಲಿ ನಾರ್ಯ ಗುತ್ತು ತಿಮ್ಮಪ್ಪ ಕೊಂಡೆಯಾನೆ ಮಂಜು ಭಂಡಾರಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ಸಹಸ್ರಾರು ಭಕ್ತರು ಹೊರೆಕಾಣಿಕೆ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ಅನಂತರ ದೇವ ಸ್ಥಾನದ ರಥಗದ್ದೆಯಲ್ಲಿ ಉಗ್ರಾಣ ಮುಹೂರ್ತ ವನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಕುರ್ನಾಡುಗುತ್ತು ಡಾ| ಎಚ್‌.ಬಾಲಕೃಷ್ಣ ನಾಯ್ಕ ಉದ್ಘಾಟಿಸಿದರು.

ಹೊರೆಕಾಣಿಕೆ ಸಮಿತಿ ಸಂಚಾಲಕ ಸಂತೋಷ್‌ ಕುಮಾರ್‌ ರೈ ಬೋಳಿ ಯಾ ರ್‌, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಿವಶಂಕರ ಭಟ್‌ ಕಾಡಿ ಮಾರು, ಸ್ವಾಗತ ಸಮಿತಿ ಪ್ರಧಾನ ಸಂಚಾ ಲಕ ಟ.ಜಿ. ರಾಜಾರಾಮ ಭಟ್‌, ಜೀರ್ಣೋ ದ್ಧಾರ ಸಮಿತಿಯ ಗೌರವಾಧ್ಯಕ್ಷ ವೆಂಕಪ್ಪ ಕಾಜವ ಮಿತ್ತಕೋಡಿ, ಕಾರ್ಯಾ ಧ್ಯಕ್ಷ ನರಸಿಂಹ ಹೆಗ್ಡೆ ಕುರ್ನಾಡುಗುತ್ತು, ಜೀರ್ಣೋದ್ಧಾœರ ಸಮಿತಿ ಕಾರ್ಯಾಧ್ಯಕ್ಷ ರಾಜೇಶ್‌ ಶೆಟ್ಟಿ ಫಜೀರು ಗುತ್ತು ಸಹಿತ ಸಮಿತಿ ಪ್ರಮುಖರು ಭಾಗವಹಿಸಿದ್ದರು.

ಸಂಜೆ ಕುರ್ನಾಡುಗುತ್ತು ಎಚ್‌. ರಾಮಯ್ಯ ನಾಯ್ಕ ವೇದಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇವ ಸ್ಥಾನದ ಮುಖ್ಯ ಸಲಹೆಗಾರ ರಘು ರಾಮ ತಂತ್ರಿ ಉದ್ಘಾಟಿಸಿದರು.
ಹೊರೆಕಾಣಿಕೆ ಶೋಭಾಯಾತ್ರೆ ಬೋಳಿ ಯಾ ರ್‌ ನಿಂದ ಕುರ್ನಾಡಿಗೆ ಆಗಮಿ ಸುವ ಸಂದರ್ಭ ದಾರಿ ಮಧ್ಯೆ ಮದ್ದನಡ್ಕ ಮತ್ತು ಕುರ್ನಾಡಿನ ಮುಸ್ಲಿಂ ಬಾಂಧವರು ತಂಪು ಪಾನೀಯ ವಿತರಿಸಿ ಸೌಹಾರ್ದತೆ ಮೆರೆದರು.

LEAVE A REPLY

Please enter your comment!
Please enter your name here