Home ಧಾರ್ಮಿಕ ಸುದ್ದಿ ದೇವರಿಗೆ ಅಷ್ಟಬಂಧ ಲೇಪನ

ದೇವರಿಗೆ ಅಷ್ಟಬಂಧ ಲೇಪನ

1790
0
SHARE

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜ. 25ರಂದು ಶಿಖರ ಪ್ರತಿಷ್ಠೆ, ಶ್ರೀ ದೇವರಿಗೆ ಅಷ್ಟಬಂಧ ಲೇಪನ, ಗಣಪತಿ ಪುನಃಪ್ರತಿಷ್ಠೆ, ಧ್ವಜಕಲಶಾಧಿವಾಸ, ಧ್ವಜಪ್ರತಿಷ್ಠೆ, ಧ್ವಜ ಕಲಶಾಭಿಷೇಕ, ಮಹಾಬಲಿಪೀಠ ಕಲಶಾಧಿವಾಸ, ಮಹಾಬಲಿಪೀಠ ಪ್ರತಿಷ್ಠೆ, ಮಹಾಬಲಿ ಪೀಠ ಕಲಷಾಭಿಷೇಕ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಶಿಬರೂರು ವೇದವ್ಯಾಸ ತಂತ್ರಿ ಮತ್ತು ಕೃಷ್ಣರಾಜ ತಂತ್ರಿ ಅವರ ಸಹಯೋಗದೊಂದಿಗೆ ನಡೆಯಿತು.

ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಸನತ್‌ ಕುಮಾರ್‌ ಶೆಟ್ಟಿ ಕೊಡೆತ್ತೂರುಗುತ್ತು, ವಿದ್ವಾನ್‌ ಪಂಜ ಭಾಸ್ಕರ ಭಟ್, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕಮಲಾದೇವಿ ಪ್ರಸಾದ್‌ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಉಮಾನಾಥ ಕೋಟ್ಯಾನ್‌, ಕಟೀಲು ಪಂಚಾಯತ್‌ ಅಧ್ಯಕ್ಷೆ ಗೀತಾ ಪೂಜಾರಿ, ಉಪಾಧ್ಯಕ್ಷ ಕಿರಣ್‌ ಕುಮಾರ್‌ ಶೆಟ್ಟಿ, ಮಾಗಂದಡಿ ಕುಟುಂಬದ ಯಜಮಾನ ಪಾಂಡುರಂಗ ಎನ್‌. ಶೆಟ್ಟಿ, ನಿರಂಜನ್‌ ಶೆಟ್ಟಿ, ರಾಜೇಂದ್ರ ಶೆಟ್ಟಿ, ಜಗದೀಶ್‌ ಅಳ್ವ, ಶ್ರೀಧರ ಆಳ್ವ, ಚಿತ್ತರಂಜನ್‌ ಶೆಟ್ಟಿ, ಹರ್ಷರಾಜ್‌ ಶೆಟ್ಟಿ, ಡಾ| ವಿಶ್ವರಾಜ್‌ ಶೆಟ್ಟಿ, ಅನಿಲ್‌ ಶೆಟ್ಟಿ, ಕಿರಣ್‌ ಶೆಟ್ಟಿ, ರವಿಪ್ರಕಾಶ್‌ ರೈ, ದೇವದತ್ತ ಎನ್‌. ಶೆಟ್ಟಿ, ದೇವದಾಸ್‌ ಶೆಟ್ಟಿ, ಪುರಂದರ ಶೆಟ್ಟಿ, ಸುರೇಶ್‌ ಶೆಟ್ಟಿ ಕೊಡೆತ್ತೂರು, ಪುರುಷೋತ್ತಮ ಶೆಟ್ಟಿ ಕೊಡೆತ್ತೂರು, ಜಯರಾಮ ಶೆಟ್ಟಿ ಮೂಡುಬಿದಿರೆ, ರಾಜೇಶ್‌ ಶೆಟ್ಟಿ ಬೆಂಗಳೂರು, ರಾಘವೇಂದ್ರ ಆಚಾರ್‌ ಕುಂಜಾರುಗಿರಿ, ಮಹಾಬಲ ಶೆಟ್ಟಿ ಐಕಳ, ಹರಿಕೃಷ್ಣ ಪುನರೂರು, ಸುಧೀರ್‌ ಶೆಟ್ಟಿ ಕೊಡೆತ್ತೂರು, ಪ್ರಸನ್ನ ಶೆಟ್ಟಿ ಅತ್ತೂರುಗುತ್ತು, ರಾಜೇಂದ್ರ ಶೆಟ್ಟಿ ಕುಡ್ತಿಮಾರಗುತ್ತು, ಸುಧಾಕರ ಶೆಟ್ಟಿ ಮೂಡ್ರಗುತ್ತು, ಚರಣ್‌ ಶೆಟ್ಟಿ ಕೊಜಪಾಡಿ ಬಾಳಿಕೆ, ಕೊಡೆತ್ತೂರು ಗುತ್ತು ಗುತ್ತಿನಾರ್‌ ಸಂಜೀವ ಶೆಟ್ಟಿ, ಜಯರಾಮ ಮುಕಾಲ್ದಿ ಕೊಡೆತ್ತೂರು, ಗಣೇಶ್‌ ಶೆಟ್ಟಿ ಮಿತ್ತಬೈಲ್‌ ಗುತ್ತು, ದೇವಿಪ್ರಸಾದ್‌ ಶೆಟ್ಟಿ ಕೊಡೆತ್ತೂರು, ವಿಶ್ವನಾಥ ಶೆಟ್ಟಿ ಮೂಡು ದೇವಸ್ಯ, ಅಜಾರುಗುತ್ತು ವಿಜಯ ಶೆಟ್ಟಿ, ರವಿರಾಜ್‌ ಶೆಟ್ಟಿ ಬಾಳಿಕೆ ಮನೆ, ಗಣೇಶ್‌ ಶೆಟ್ಟಿ ಐಕಳ, ಹರೀಶ್‌ ಶೆಟ್ಟಿ ಐಕಳ, ಕರ್ನಿರೆ ವಿಶ್ವನಾಥ ಶೆಟ್ಟಿ, ಆದಿತ್ಯ ಮುಕಾಲ್ದಿ ಖಂಡಿಗೆ ಬೀಡು, ಅರವಿಂದ ಪೂಂಜ, ಭುವನಾಭಿರಾಮ ಉಡುಪ, ಈಶ್ವರ್‌ ಕಟೀಲು, ಅಭಿಲಾಷ್‌ ಶೆಟ್ಟಿ ಕಟೀಲು, ಆದರ್ಶ್‌ ಶೆಟ್ಟಿ ಎಕ್ಕಾರು, ಲೋಕಯ್ಯ ಸಾಲ್ಯಾನ್‌ ಕೊಂಡೇಲ, ಜನಾರ್ದನ ಕಿಲೆಂಜೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here