ಬ್ರಹ್ಮಾವರ: ಆರೂರು ಮಹತೋಭಾರ ಶ್ರೀ ವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ಮಾ.9ರ ಸೂರ್ಯೋದಯದಿಂದ ಮಾ.10ರ ಸೂರ್ಯೋದಯದ ತನಕ ಶಾರಿಕಾ ರತ್ನಾಕರ ಶೆಟ್ಟಿ ಮತ್ತು ಉಪೂರು ರತ್ನಾಕರ ದೂಮಣ್ಣ ಶೆಟ್ಟಿ ಹಾಗೂ ಕುಟುಂಬಸ್ಥರ ಸೇವಾ ರೂಪದಲ್ಲಿ ರಾಶಿಪೂಜಾ ಮಹೋತ್ಸವಾದಿಗಳು ಜರಗಲಿದೆ.
ಸತತ ಅರ್ಚನೆ, ನಿರಂತರ ಸಂಕೀರ್ತನೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಹಾಗೂ ದೇವಳದ ಬಯಲು ರಂಗಮಂದಿರದಲ್ಲಿ ಭಜನೆ, ವಾದ್ಯ ಸಂಗೀತ, ನೃತ್ಯ, ಹರಿಕಥೆ,
ಯಕ್ಷಗಾನ ಪ್ರದರ್ಶನ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಆಶೀರ್ವಚನ ಕಾರ್ಯಕ್ರಮ ನಡೆಯಲಿದೆ. ಪ್ರತಿ ರಾಶಿ ಪೂಜಾ ಉತ್ಸವದಲ್ಲಿ ಪ್ರತ್ಯೇಕ ಸುತ್ತು ಸೇವೆಗಳು ಮತ್ತು ನೃತ್ಯ ಅವಧಾನ ಸೇವೆಗಳನ್ನು ಏರ್ಪಡಿಸಲಾಗಿದೆ ಎಂದು ದೇವಳದ ಆಡಳಿತ ಮೊಕ್ತೇಸರರ ಪ್ರಕಟಣೆ ತಿಳಿಸಿದೆ.