Home ಧಾರ್ಮಿಕ ಸುದ್ದಿ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನ: ನೂತನ ರಥ ಸಮರ್ಪಣೆ

ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನ: ನೂತನ ರಥ ಸಮರ್ಪಣೆ

2848
0
SHARE
ನೂತನ ರಥ ಸಮರ್ಪಣೆಯ ಧಾರ್ಮಿಕ ವಿಧಿ-ವಿದಾನಗಳು ನಡೆದವು.

ಪುಂಜಾಲಕಟ್ಟೆ: ಬಂಟ್ವಾಳ ತಾ| ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನಕ್ಕೆ ಅಮಾrಡಿ ಮಂಗ್ಲಿಮಾರ್‌ ಶ್ರೀ ಅಣ್ಣಪ್ಪ, ಕಲಾಯಿ ಮಹಮ್ಮಾಯಿ ದೇವಿ, ಪರಿವಾರ ದೈವಗಳ ಕ್ಷೇತ್ರದ ಆಡಳಿತ ಮೊಕ್ತೇಸರ ಮಾವಂತೂರುಗುತ್ತು ರವಿಶಂಕರ ಶೆಟ್ಟಿ ಅವರು ನೂತನ ರಥವನ್ನು ಕೊಡುಗೆಯಾಗಿ ನೀಡಿದ್ದು, ರಥ ಸಮರ್ಪಣೆಯ ಧಾರ್ಮಿಕ ವಿಧಿ- ವಿಧಾನಗಳು ದೇವಾಲಯದ ಅಂಗಣದಲ್ಲಿ ಜರಗಿತು.

ಕ್ಷೇತ್ರದ ತಂತ್ರಿ ವೇ| ಮೂ| ಬ್ರಹ್ಮಶ್ರೀ ನಡ್ವಂತಾಡಿ ಉದಯ ಪಾಂಗಣ್ಣಾಯ ಅವರ ನೇತೃತ್ವದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಎ. ರಾಜ ಭಟ್‌ ಸಹಕಾರದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ನಡೆದವು. ಆಡಳಿತ ಮೊಕ್ತೇಸರ ಎ. ರಾಜೇಂದ್ರ ಶೆಟ್ಟಿ, ವೈದಿಕರಾದ ನರಸಿಂಹ ಹೊಳ್ಳ ಹೊಳ್ಳರಬೈಲು, ದಿನೇಶ್‌ ಭಟ್‌ ರಾಯಿ, ಮಾವಂತೂರುಗುತ್ತು ರವಿಶಂಕರ ಶೆಟ್ಟಿ ದಂಪತಿ, ಆಡಳಿತ ಸಮಿತಿ ಕಾರ್ಯದರ್ಶಿ ಜಗದೀಶ ಆಳ್ವ ಅಗ್ಗೊಂಡೆ, ಪ್ರಮುಖರಾದ ಹರಿಶ್ಚಂದ್ರ ಪಕ್ಕಳ, ಮನೋಹರ ಶೆಟ್ಟಿ ಸಂಗಬೆಟ್ಟು, ಉಮೇಶ್‌ ಡಿ.ಎಂ. ಮತ್ತಿತರರಿದ್ದರು.

ಜ. 26ರಿಂದ ವರ್ಷಾವಧಿ ಜಾತ್ರೆ ಆರಂಭಗೊಂಡಿದ್ದು, ಜಾತ್ರೆ, ನಡುಬಲಿ ಉತ್ಸವದ ಅಂಗವಾಗಿ ಜ. 28ರಂದು ಮಧ್ಯಾಹ್ನ ‘ಉತ್ತರನ ಪೌರುಷ’ ತಾಳಮದ್ದಳೆ, ಸಂಜೆ 5.30ಕ್ಕೆ ನೂತನ ರಥ ಸಮರ್ಪಣೆ, ಧಾರ್ಮಿಕ ಸಭೆಯಲ್ಲಿ ಮಾವಂತೂರುಗುತ್ತು ರವಿಶಂಕರ ಶೆಟ್ಟಿ ಅವರನ್ನು ಸಮ್ಮಾನಿಸಲಾಗುವುದು. ರಾತ್ರಿ ನೃತ್ಯ ವೈಭವ ಪ್ರದರ್ಶನಗೊಳ್ಳಲಿದೆ.

LEAVE A REPLY

Please enter your comment!
Please enter your name here