Home ಧಾರ್ಮಿಕ ಸುದ್ದಿ ಅರಿತೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬ್ರಹ್ಮಕಲಶಕ್ಕೆ ಸಂಕಲ್ಪ

ಅರಿತೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬ್ರಹ್ಮಕಲಶಕ್ಕೆ ಸಂಕಲ್ಪ

517
0
SHARE

ಉಡುಪಿ : ಶ್ರೀ ಸೋದೆ ವಾದಿರಾಜ ಮಠಕ್ಕೆ ಒಳಪಟ್ಟ ಅರಿತೋಡು ಶ್ರೀ ಜನಾರ್ದನ ಸುಬ್ರಹ್ಮಣ್ಯ ದೇವಸ್ಥಾನದ ಶಿಥಿಲಗೊಂಡ ಗರ್ಭಗುಡಿಗೆ ತಾಮ್ರದ ಹೊದಿಕೆ ಸಹಿತ ಜೀಣೋದ್ಧಾರ ಹಾಗೂ ಬ್ರಹ್ಮಕಲಶ 2020ರ ಫೆಬ್ರವರಿ ತಿಂಗಳಲ್ಲಿ ಜರಗಿಸುವ ಸಂಕಲ್ಪವನ್ನು ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ನೆರವೇರಿಸಿದರು.

ಸೋದೆ ಕ್ಷೇತ್ರದಲ್ಲಿ ಶ್ರೀಗಳು ವಾದಿರಾಜ ವೃಂದಾವನವನ್ನು ಶಿಲಾಮಯಗೊಳಿಸುವುದರೊಂದಿಗೆ ಸುಮಾರು 40 ಕೋಟಿಗೂ ಮೀರಿದ ವಿವಿಧ ಕಾಮಗಾರಿಗಳನ್ನು ನೆರವೇರಿಸುತ್ತಿರುವುದರಿಂದ ವಾದಿರಾಜರು ರಚಿಸಿ ಸಮಾಜಕ್ಕೆ ನೀಡಿದ “ಲಕ್ಷ್ಮೀಶೋಭಾನೆ’ ಹಾಡನ್ನು ಮನೆ ಮನೆಯಲ್ಲಿ ಹಾಡಿ ಭಕ್ತರಿಂದ ನೀಡಲ್ಪಟ್ಟ ಕಾಣಿಕೆಯನ್ನು ಸೋದೆ ಕ್ಷೇತ್ರದ ಜೀರ್ಣೋದ್ಧಾರಕ್ಕೆ ನೀಡುವ ಅಪೂರ್ವ ಆಶಯವನ್ನು ಹೊಂದಿದ “ಮನೆ-ಮನೆಯಲ್ಲಿ ಲಕ್ಷ್ಮೀಶೋಭಾನೆ’ ಯೋಜನೆಗೂ ಶ್ರೀಗಳು ಚಾಲನೆ ನೀಡಿದರು.

ದೇವಳದ ಅರ್ಚಕ ಬಿ. ಗೋಪಾಲಕೃಷ್ಣ ಉಪಾಧ್ಯ, ಪುತ್ತೂರು ಬ್ರಾಹ್ಮಣ ಸಭಾ ಅಧ್ಯಕ್ಷ ಸುಬ್ರಹ್ಮಣ್ಯ ಜೋಶಿ, ಹಯವದನ ಭಟ್‌, ಮುರಲಿ ಕಡೆಕಾರ್‌, ಪಿ. ದಿನೇಶ್‌ ಪೂಜಾರಿ, ಶ್ರೀ ಕಾಂತ ಉಪಾಧ್ಯ, ಶ್ರೀರಾಮ ಉಪಾಧ್ಯ ಹಾಗೂ ಅರಿತೋಡು ಜನಾರ್ದನ ಸುಬ್ರಹ್ಮಣ್ಯ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here