ಮಲ್ಪೆ : ಉಡುಪಿ ಸಮೀಪದ ಪುತ್ತೂರು ಸುಬ್ರಹ್ಮಣ್ಯನಗರ ಅರಿತೋಡು ಶ್ರೀ ಜನಾರ್ದನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಫೆ. 2ರಿಂದ ಆರಂಭಗೊಂಡಿದ್ದ ಶ್ರೀ ಜನಾರ್ದನ ಸುಬ್ರಹ್ಮಣ್ಯ ದೇವರ ಪುನಃಪ್ರತಿಷ್ಠೆ , ಬ್ರಹ್ಮಕಲಶೋತ್ಸವವು ರವಿವಾರ ಬ್ರಹ್ಮ ಕಲಶಾಭಿಷೇಕದೊಂದಿಗೆ ಸಂಪನ್ನಗೊಂಡಿತು.
ಶ್ರೀ ಸೋದೆ ವಾದಿರಾಜ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ಮಾರ್ಗ ದರ್ಶನದಲ್ಲಿ ವಾಸುತಜ್ಞ ಅವಧಾನಿ ಸುಬ್ರಹ್ಮಣ್ಯ ಭಟ್, ನಂದಳಿಕೆ ವಿಠಲ ಭಟ್ ಮತ್ತು ಕುತ್ಯಾರು ರಾಜ್ಗೋಪಾಲ ಆಚಾರ್ಯ, ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಉಪಾಧ್ಯರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿಗಳು ನಡೆದು, ರವಿ ವಾರ ಬೆಳಗ್ಗೆ 9.10ಕ್ಕೆ ಶ್ರೀ ಜನಾರ್ದನ ಸುಬ್ರಹ್ಮಣ್ಯ ದೇವರಿಗೆ ಬ್ರಹ್ಮಕಲಶಾಭಿಷೇಕವು ಜರಗಿತು. ಅಪರಾಹ್ನ ಮಹಾ ಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.ರಾತ್ರಿ ರಂಗಪೂಜೆ, ದೀಪಾರಾಧನೆಯಾಗಿ ರಥೋತ್ಸವ ನಡೆಯಿತು.