ಕುಂಬಳೆ : ಕುಂಬಳೆ ಆರಿಕ್ಕಾಡಿ ಪಾಡಾಂಗರೆ ಶ್ರೀ ಭಗವತೀ ಕ್ಷೇತ್ರ ಕಳಿಯಾಟ ಮಹೋತ್ಸವವು ಜ.31ರಿಂದ ಫೆ. 7ರ ತನಕ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಪ್ರಥಮ ದಿನವಾದ ಜ.31ರಂದು ಬೆಳಗ್ಗೆ ಗಣಹೋಮದ ಬಳಿಕ ಕೊಡಿಮರ ಏರಿಸಲಾಯಿತು. ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದಿಂದ ಶ್ರೀ ಕ್ಷೇತ್ರಕ್ಕೆ ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ದೇವಾಡಿಗ ಸಂಘ, ಚೇನಕ್ಕೋಡು, ಮಧೂರು ಇವರು ನೂತನವಾಗಿ ನಿರ್ಮಿಸಿದ ಆನೆ ಚಪ್ಪರ ಉದ್ಘಾಟನೆಯನ್ನು ಕ್ಷೇತ್ರದ ತಂತ್ರಿವರ್ಯ ವೇ|ಮೂ| ಬ್ರಹ್ಮಶ್ರೀ ಕರ್ಕುಳ ಶಂಕರನಾರಾಯಣ ಕಡಮಣ್ಣಾಯ ಅವರು ಮತ್ತು ಆರಿಕ್ಕಾಡಿ ಪಾರೆಸ್ಥಾನ ಶ್ರೀಆಲಿ ಚಾಮುಂಡಿ ಭಗವತೀ ಕ್ಷೇತ್ರದ ದರ್ಶನ ಪಾತ್ರಿ ಶ್ರೀ ನಾಗೇಶ ಬೆಳ್ಚಪ್ಪಾಡರು ನೆರವೇರಿಸಿದರು. ರಾತ್ರಿ 9 ಗಂಟೆಗೆ ಭಂಡಾರ ಏರಿತು.
ಫೆ. 1ರಂದು ಪ್ರಾತಃಕಾಲ ಭಗವತೀ ದರ್ಶನ, ಕೆಂಡಸೇವೆ, ಪ್ರದಕ್ಷಿಣೆ, ಬಿಂಬ ಬಲಿ ದರ್ಶನ, ಧ್ವಜಾರೋಹಣ, ರಾತ್ರಿ ಪುಳ್ಳಿಪೂವಣ್ಣ ದೈವದ ವೆಳ್ಳಾಟಂ ಬಳಿಕ ಅನ್ನಸಂತರ್ಪಣೆ
ನಡೆಯಿತು. ರಾತ್ರಿ ಅಣಂಗುಭೂತ, ಪುಳ್ಳಿಪೂವಣ್ಣ ದೈವದ ಕೋಲ ನಡೆಯಿತು.
ಇಂದಿನ ಕಾರ್ಯಕ್ರಮ
ಫೆ. 2ರಂದು ಪ್ರಾತಃಕಾಲ 6ರಿಂದ ಬಿಲ್ಲಾಪುರತ ಭಗವತೀ, ಸಂಜೆ 6ರಿಂದ ಅಡಯಾಳಂ ಚೆರ್ಕಲ್, 7.30 ರಿಂದ ವಯನಾಡ್ ಕುಲವನ್ ದೈವದ ಕೈಮೀದ್, ಮರ ಚೇರ್ಕಲ್ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6.30ರಿಂದ ದೇವಾಡಿಗ ಮಹಿಳಾ ವೇದಿಕೆಯ ಸದಸ್ಯೆಯರಿಂದ ಮತ್ತು ಮಕ್ಕಳಿಂದ ನೃತ್ಯ ಸಿಂಚನ, 7.30ರಿಂದ ವಿಠಲ ನಾಯಕ್ ವಿಟ್ಲ ಮತ್ತು ಬಳಗದಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.