Home ಧಾರ್ಮಿಕ ಸುದ್ದಿ ಅರ್ಧಮಂಡಲ ಉತ್ಸವ: ಮಾ.19ರಿಂದ ಧಾರ್ಮಿಕ ವಿಧಿ ವಿಧಾನ

ಅರ್ಧಮಂಡಲ ಉತ್ಸವ: ಮಾ.19ರಿಂದ ಧಾರ್ಮಿಕ ವಿಧಿ ವಿಧಾನ

1489
0
SHARE

ವಿಟ್ಲಪಟ್ನೂರು : ವಿಟ್ಲ ಪಟ್ನೂರು ಗ್ರಾಮದ ಮೈತ್ರೇಯೀ ಗುರುಕುಲವು 24ನೇ ವರ್ಷಕ್ಕೆ ಕಾಲಿರಿಸಿದ್ದು, ಈ ನಿಟ್ಟಿನಲ್ಲಿ ಅರ್ಧಮಂಡಲ ಉತ್ಸವವನ್ನು ಹಮ್ಮಿಕೊಂಡಿದೆ. ಮಾ. 19ರಂದು ಬೆಳಗ್ಗೆ 10ಕ್ಕೆ ಶಾಸ್ತ್ರೋಕ್ತ ವಿಧಿ ವಿಧಾನ ಗಳ ಮೂಲಕ ಕಾರ್ಯಕ್ರಮ ಆರಂಭಗೊಳ್ಳಲಿದೆ. ಇದೇ ಸಂದರ್ಭ ವಿದ್ಯಾನಿಕಷ ಎಂಬ ಅವಲೋಕನವನ್ನು ಆಯೋಜಿಸಲಾಗಿದೆ. ಅಧ್ಯಯನ ಮಾಡಿರುವವರು ವಿದ್ವಾಂಸರ ಮುಂದೆ ಪ್ರಸ್ತುತಪಡಿಸುವುದೇ ಅವಲೋಕನ ವಾಗಿದ್ದು, ಈ ಎಲ್ಲ ಕಾರ್ಯಕ್ರಮಗಳನ್ನು ವಿಟ್ಲ ಅರಮನೆಯ ವಿ. ಜನಾರ್ದನ ವರ್ಮ ಅರಸರು ಉದ್ಘಾಟಿಸಲಿದ್ದಾರೆ. ವೇದಾಂತಶಾಸ್ತ್ರ ಮತ್ತು ನ್ಯಾಯಶಾಸ್ತ್ರದ ಕೆಲವು ಗ್ರಂಥಗಳ ಅವಲೋಕನವನ್ನು ಛಾತ್ರೆಯರು ನೀಡಲಿದ್ದಾರೆ.

ಪ್ರಧಾನ ಪರೀಕ್ಷಕರಾಗಿ ರಾಜೀವ ಗಾಂಧಿ ಪರಿಸರದ ವೇದಾಂತ ವಿಭಾಗದ ಸಹಪ್ರಾಧ್ಯಾಪಕ ಡಾ|ಗಣೇಶ ಈಶ್ವರ ಭಟ್‌, ಬೆಂಗಳೂರು ಅಮೃತ ವಿದ್ಯಾ ಪೀಠಂನ ಸಹಪ್ರಾಧ್ಯಾಪಕ ಡಾ| ಅನಂತ ಶರ್ಮ, ವಿದ್ವಾನ್‌ ಟಿ.ಎನ್‌. ಪ್ರಭಾಕರ, ವಿದ್ವಾನ್‌ ಸತ್ಯನಾರಾಯಣ, ವಿದ್ವಾನ್‌ ಶಂಕರನಾರಾಯಣ ಭಟ್‌ ಕೇಕಣಾಜೆ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here