ಅರಂತೋಡು : ಅರಂತೋಡು ಗ್ರಾಮದ ತೋಟಂಪಾಡಿ ಶ್ರೀ ಉಳ್ಳಾಕ್ಲು, ಪರಿವಾರ ದೈವಗಳ ನೇಮ ನಡೆಯಿತು. ಅರಂತೋಡು ತೋಟಂಪಾಡಿ ಶ್ರೀ ಉಳ್ಳಾಕ್ಲು ಮತ್ತು ಪರಿವಾರ ದೈವಗಳ ಸಮಿತಿ ಅಧ್ಯಕ್ಷ ಮೇದಪ್ಪ ಗೌಡ ಉಳುವಾರು, ಕಾರ್ಯದರ್ಶಿ ಎ.ಕೆ. ಗೋಪಾಲ ಗೌಡ, ಜತೆ ಕಾರ್ಯದರ್ಶಿ ಯು.ಎಂ. ಶೇಷಗಿರಿ, ಖಜಾಂಚಿ ಕೆ.ಆರ್. ಧನಂಜಯ, ತಾಲೂಕು ಪಂಚಾಯತ್ ಸದಸ್ಯೆ ಪುಷ್ಪಾ ಮೇದಪ್ಪ, ಅರಂತೋಡು-
ತೊಡಿಕಾನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ತೊಡಿಕಾನ ಶ್ರೀಚ ಮಲ್ಲಿಕಾರ್ಜುನ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು, ಸದಸ್ಯರಾದ ಕೆ.ಕೆ. ಬಾಲಕೃಷ್ಣ ಕುಂಟುಕಾಡು, ದೇಗುಲದ ಮ್ಯಾನೇಜರ್ ಆನಂದ ಕಲ್ಲಗದ್ದೆ ಹಾಗೂ ತೋಟಂಪಾಡಿ ಶ್ರೀ ಉಳ್ಳಾಕ್ಲು ಜೀರ್ಣೋದ್ಧಾರ ಸಮಿತಿ ಹಾಗೂ ಬೈಲುವಾರು ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಸದಸ್ಯರು, ಭಕ್ತರು ದೈವದ ಪ್ರಸಾದ ಸ್ವೀಕರಿಸಿದರು.