ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಅರಳ ಶ್ರೀ ಗರುಡ ಮಹಾಕಾಳಿ ಕ್ಷೇತ್ರದಲ್ಲಿ ವರ್ಷಾವಧಿ ಮಹೋತ್ಸವ ಪ್ರಯುಕ್ತ ಸೋಮವಾರ ರಾತ್ರಿ ನೂತನ ರಥದಲ್ಲಿ ರಥೋತ್ಸವ ನಡೆಯಿತು.
ಅಮ್ಟ್ ಡಿ ಮಂಗ್ಲಿಮಾರ್ ಶ್ರೀ ಅಣ್ಣಪ್ಪ, ಕಲಾಯಿ ಮಹಮ್ಮಾಯಿ ದೇವಿ ಹಾಗೂ ಪರಿವಾರ ದೈವಗಳ ಕ್ಷೇತ್ರದ ಆಡಳಿತ ಮೊಕ್ತೇಸರ ಮಾವಂತೂರುಗುತ್ತು ರವಿಶಂಕರ ಶೆಟ್ಟಿ ಕೊಡುಗೆಯಾಗಿ ನೀಡಿದ ನೂತನ ರಥದಲ್ಲಿ ದೇಗುಲದಲ್ಲಿ ಪ್ರಥಮ ಬಾರಿಗೆ ರಥೋತ್ಸವವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.
ಕ್ಷೇತ್ರದ ತಂತ್ರಿ ವೇ| ಮೂ| ಬ್ರಹ್ಮಶ್ರೀ ನಡ್ವಂತಾಡಿ ಉದಯ ಪಾಂಗಣ್ಣಾಯ ಅವರ ನೇತೃತ್ವದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಎ. ರಾಜ ಭಟ್, ಹರೀಶ್ ಭಟ್, ದಿನೇಶ್ ಭಟ್ ರಾಯಿ ಸಹಕಾರದಲ್ಲಿ ವೈದಿಕ ಕಾರ್ಯಕ್ರಮಗಳು ನಡೆದವು.
ಆಡಳಿತ ಮೊಕ್ತೇಸರ ಎ. ರಾಜೇಂದ್ರ ಶೆಟ್ಟಿ, ಅಮ್ಟ್ ಡಿ ಮಂಗ್ಲಿಮಾರ್ ಶ್ರೀ ಅಣ್ಣಪ್ಪ, ಮಾವಂತೂರುಗುತ್ತು ರವಿಶಂಕರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎನ್.ಎಂ. ಅಡ್ಯಂತಾಯ, ಪ್ರಗತಿಪರ ಕೃಷಿಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಬಂಟ್ವಾಳ ಎಪಿಎಂಸಿ ಸದಸ್ಯ ಪದ್ಮರಾಜ ಬಲ್ಲಾಳ್ ಮಾವಂತೂರು, ತಾ.ಪಂ. ಸದಸ್ಯ ಪ್ರಭಾಕರ ಪ್ರಭು, ಆಡಳಿತ ಸಮಿತಿ ಕಾರ್ಯದರ್ಶಿ ಜಗದೀಶ ಆಳ್ವ ಅಗ್ಗೊಂಡೆ, ಪ್ರಮುಖರಾದ ಹರಿಶ್ಚಂದ್ರ ಪಕ್ಕಳ, ಮನೋಹರ ಶೆಟ್ಟಿ ಸಂಗಬೆಟ್ಟು, ಸುಬ್ಬಯ್ಯ ಶೆಟ್ಟಿ ಬಾರ್ಲಗುತ್ತು, ಅನಂತ ಭಟ್ ಕೊಯಿಲ, ದಿವಾಕರ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷೆ ತುಂಗಮ್ಮ, ಸದಸ್ಯ ಲಕ್ಷ್ಮೀಧರ ಶೆಟ್ಟಿ, ರಾಮಣ್ಣ ರೈ ಮಾವಂತೂರು, ಉಮೇಶ್ ಡಿ.ಎಂ., ಚಂದ್ರಶೇಖರ ಶೆಟ್ಟಿ ಪಂಬದಬೆಟ್ಟು, ಮುರಳೀಧರ ಶೆಟ್ಟಿ, ಡೊಂಬಯ ಅರಳ, ರಂಜನ್ ಕುಮಾರ್
ಶೆಟ್ಟಿ, ಶೇಖರ ಅಂಚನ್, ಪದ್ಮನಾಭ ಸಾಲಿಯಾನ್, ಶರತ್ ಕುಮಾರ್ ಶೆಟ್ಟಿ, ಪ್ರವೀಣ್ ಚಂದ್ರ ಆಳ್ವ ಕಡೆಗುಂಡ್ಯ, ನಂದರಾಮ ರೈ ಮತ್ತಿತರರಿದ್ದರು.
ಮಂಗಳವಾರ ಬೆಳಗ್ಗೆ ಕವಾಟೋದ್ಘಾಟನೆ, ಅರಳ ಕೊಯಿಲ ಗ್ರಾಮಸ್ಥರಿಂದ ಶ್ರೀ ಚಂಡಿಕಾ ಯಾಗ, ಮಹಾಪೂಜೆ, ಚೂರ್ಣೋತ್ಸವ, ಮಧ್ಯಾಹ್ನ ಕಡೆಗುಂಡ್ಯ ಕುಟುಂಬಿಕರಿಂದ ಬ್ರಾಹ್ಮಣಾರಾಧನೆ ಮತ್ತು ಅನ್ನ ಸಂತರ್ಪಣೆ, ಶ್ರೀ ದೇವರ ಅವಭೃತ ಸ್ನಾನ, ಧ್ವಜಾವರೋಹಣ ನಡೆಯಿತು.