ಸಂಪ್ಯ : ಇಲ್ಲಿನ ಶ್ರೀ ಅಣ್ಣಪ್ಪ ಪಂಜುರ್ಲಿ ಕಲ್ಲುರ್ಟಿ ದೈವಸ್ಥಾನದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ದೈವಗಳ ನೇಮ ಜರಗಿತು. ಪ್ರಶಾಂತ್ ಕಲ್ಲೂರಾಯರ ನೇತೃ ತ್ವದಲ್ಲಿ ಗಣಹೋಮ, ಸತ್ಯ ನಾರಾಯಣ ಪೂಜೆ ಜರಗಿತು. ಸಂಜೆ ದೈವಗಳಿಗೆ ತಂಬಿಲ, ದೈವಗಳ ಭಂಡಾರ ತೆಗೆದು, ಭಜನೆ, ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಕಲ್ಲುರ್ಟಿ, ಅಣ್ಣಪ್ಪ ಪಂಜುರ್ಲಿ, ಗುಳಿಗ ದೈವದ ನೇಮ ನಡೆಯಿತು. ಆಡಳಿತ ಮೊಕ್ತೇಸರ ಅಣ್ಣಿ ಪೂಜಾರಿ, ಶಾಸಕಿ ಶಕುಂತಳಾ ಶೆಟ್ಟಿ, ಅರುಣ್ ಕುಮಾರ್ ಪುತ್ತಿಲ, ಉದ್ಯಮಿ ಜಯಂತ್ ನಡುಬೈಲ್, ರವೀಂದ್ರ ಶೆಟ್ಟಿ ನುಳಿಯಾಲು, ರಮೇಶ್ ರೈ ಮೊಟ್ಟೆತ್ತಡ್ಕ, ವಿಜಯ ಬಿ.ಎಸ್., ಮಲ್ಲಿಕಾ ಪಕ್ಕಳ, ಗಿರಿಯಪ್ಪ ಪೂಜಾರಿ ಕಿನ್ನಿಮಜಲು ಮೊದಲಾದವರು ಉಪಸ್ಥಿತರಿದ್ದರು.