Home Uncategorized ಗೋಳಿಯಡ್ಕದಲ್ಲಿ ಶ್ರೀ ಮಾರಿಯಮ್ಮ ದೇವಿಯ ವಾರ್ಷಿಕ ಪೂಜೆ

ಗೋಳಿಯಡ್ಕದಲ್ಲಿ ಶ್ರೀ ಮಾರಿಯಮ್ಮ ದೇವಿಯ ವಾರ್ಷಿಕ ಪೂಜೆ

929
0
SHARE

ಕಡಬ : ರೆಂಜಿಲಾಡಿ ಗ್ರಾಮದ ಗೋಳಿಯಡ್ಕದಲ್ಲಿ ಶ್ರೀ ಮಾರಿಯಮ್ಮ ದೇವಿಯ 35ನೇ ವಾರ್ಷಿಕ ಪೂಜೆಯು ರವಿವಾರ ಜರಗಿತು. ಶನಿವಾರ ಭಂಡಾರ ತೆಗೆಯುವ ಕಾರ್ಯಕ್ರಮ ಜರಗಿದ ಬಳಿಕ ಬಳಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಭಜನಾ ಕಾರ್ಯಕ್ರಮ ನಡೆದು ರಾತ್ರಿ ಶಾಲಾ ಮಕ್ಕಳ ಹಾಗೂ ಸಾರ್ವಜನಿಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ದೈವಸ್ಥಾನದ ಅರ್ಚಕ ತನಿಯಪ್ಪ ಅವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ದೈವಸ್ಥಾನದ ಆಡಳಿತ ಮೊಕ್ತೇಸರ ಕೊರಗು ಗೋಳಿಯಡ್ಕ, ಅಧ್ಯಕ್ಷ ರಾಜು ಗೋಳಿಯಡ್ಕ, ಉಪಾಧ್ಯಕ್ಷೆ ಪವಿತ್ರಾ, ಕಾರ್ಯದರ್ಶಿ ಕೃಷ್ಣಪ್ಪ, ಕೋಶಾಧಿಕಾರಿ ರವಿ ಮೀನಾಡಿ, ಕಮಲಾಕ್ಷ ಇಚಿಲಂಪಾಡಿ, ಜತೆ ಕಾರ್ಯದರ್ಶಿ ಸತೀಶ ಮದೂìರಡ್ಕ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರಗಿತು.

ಪರಿಚಾರಕರಾದ ವಸಂತ, ಚೀಂಕ್ರ, ರಾಜು, ರಾಮ, ತನಿಯ,ಸುಂದರ, ಪ್ರಸಾದ್‌, ಸಹಾಯಕರಾಗಿ ಕಮಲಾಕ್ಷ, ಕೇಶವ, ಸತೀಶ, ಸೂರಪ್ಪ, ಕೃಷ್ಣಪ್ಪ, ಸುಧಾಕರ, ಶಿವಕುಮಾರ, ಮೇದಪ್ಪ, ದಯಾನಂದ, ಆನಂದ, ರಮೇಶ, ಕವಿತಾ, ಗಿರಿಜಾ, ದೇವಕಿ, ಕಮಲಾ, ಬಿಜಿತಾ, ಸತ್ಯಲತಾ, ಜಯ, ಪುಷ್ಪಾವತಿ ಕಾರ್ಯಕ್ರಮದಲ್ಲಿ ನೆರವಾದರು.

LEAVE A REPLY

Please enter your comment!
Please enter your name here