Home ಧಾರ್ಮಿಕ ಸುದ್ದಿ ಹೊಸಬೆಟ್ಟು ದೈವಸ್ಥಾನದಲ್ಲಿ ವಾರ್ಷಿಕ ನೇಮ, ಸಮ್ಮಾನ

ಹೊಸಬೆಟ್ಟು ದೈವಸ್ಥಾನದಲ್ಲಿ ವಾರ್ಷಿಕ ನೇಮ, ಸಮ್ಮಾನ

1656
0
SHARE

ಹೊಸಬೆಟ್ಟು : ಮೊಗವೀರ ಸಮುದಾಯದವರು ಧೈರ್ಯವಂತರಾ ಗಿದ್ದು, ಮತ್ಸ್ಯೋಧ್ಯಮದ ಜತೆ ಗಡಿ ಕಾಯುವ ಕೆಲಸವನ್ನೂ ಮಾಡುತ್ತಾರೆ. ಅವರು ನಮ್ಮ ದೇಶದ ಆಸ್ತಿ ಎಂದು ಶಾಸಕ ಮೊದಿನ್‌ ಬಾವಾ ಹೇಳಿದರು. ಹೊಸಬೆಟ್ಟು ಶ್ರೀ ಸತ್ಯ ಜಾರಂದಾಯ ಧೂಮಾವತಿ ದೈವಸ್ಥಾನದ ವಾರ್ಷಿಕ ನೇಮದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನನ್ನ ಗೆಲುವಿಗೂ ಮೊಗವೀರ ಬಾಂಧ ವರು ಹೆಚ್ಚಿನ ಕೊಡುಗೆ ನೀಡಿದ್ದಾರೆ. ಸರಕಾರ ಅವರ ಬೇಡಿಕೆ ಈಡೇರಿಸುವ ಕುರಿತಂತೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಕೆಲಸ ಮಾಡಿದೆ. ಮುಂದೆಯೂ ನನ್ನಿಂದಾದ ಸಹಕಾರ ನೀಡಲು ಬದ್ದ ಎಂದರು. ಇಷ್ಟಾರ್ಥಗಳ ತತ್‌ಕ್ಷಣ ಈಡೇರಿಕೆ
ಉದ್ಯಮಿ ಪ್ರಸಾದ್‌ ರಾಜ್‌ ಕಾಂಚನ್‌ ಮಾತನಾಡಿ, ತುಳುನಾಡಿನಲ್ಲಿ ದೈವ ದೇವರು ಇಷ್ಟಾರ್ಥಗಳನ್ನು ತತ್‌ಕ್ಷಣ ಈಡೇ ರಿಸುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಇಲ್ಲಿನ ಮಣ್ಣಿನಲ್ಲಿ ದೈವಗಳ ಆರಾಧನೆ ಪ್ರತೀ ಮನೆತನಗಳಲ್ಲೂ ನಡೆದುಕೊಂಡು ಬರುತ್ತಿದೆ ಎಂದರು.

ಹೊಸಬೆಟ್ಟು ಮೊಗವೀರ ಸಂಘದ ಅಧ್ಯಕ್ಷ, ನ್ಯಾಯವಾದಿ ಗಂಗಾಧರ ಎಚ್‌. ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೊಗವೀರ ಯುವ ವೇದಿಕೆಯ ಅಧ್ಯಕ್ಷ ಲೀಲಾಧರ ತಣ್ಣೀರುಬಾವಿ ಶುಭ ಹಾರೈಸಿ ದರು. ಏಳುಪಟ್ಣ ಮೊಗವೀರ ಸಂಯುಕ್ತಾ ಸಭಾದ ಮಾಜಿ ಅಧ್ಯಕ್ಷ ಯಶವಂತ ಮೆಂಡನ್‌, ಪ್ರತಿಭಾ ಕುಳಾಯಿ, ಮುಖಂಡ ರಾದ ಸುಭಾಶ್ಚಂದ್ರ ಬೋಳೂರು, ಶರತ್‌ ಎಲ್‌. ಕರ್ಕೇರ, ರಾಜೀವ್‌ ಕಾಂಚನ್‌, ಯಜ್ಞೆàಶ್‌ ಬರ್ಕೆ, ಸಚ್ಚೀಂದ್ರನಾಥ್‌, ಯಾದವೇಶ್‌ ಪುತ್ರನ್‌, ಪುರುಷೋತ್ತಮ್‌ ಕಾಂಚನ್‌, ಉಮೇಶ್‌ ಕಾಂಚನ್‌, ಪುರಂದರ ಗುರಿಕಾರ, ಜನಾರ್ದನ ಗುರಿ ಕಾರ, ನಾರಾಯಣ ಎಸ್‌. ಪುತ್ರನ್‌ ಉಪಸ್ಥಿತರಿದ್ದರು. ಶಂಕರ ವಿ. ಸಾಲ್ಯಾನ್‌ ಸ್ವಾಗತಿಸಿ, ಯೋಗೀಶ್‌ ಆರ್‌. ಕರ್ಕೇರ ಪ್ರಾಸ್ತಾವಿಸಿದರು. ಮಧುಕರ್‌ ಎಸ್‌.ಕೆ., ಲಕ್ಷ್ಮಣ್‌ ಸುವರ್ಣ ಮತ್ತು ಜಗದೀಶ್‌ ಎನ್‌. ಕರ್ಕೇರ ನಿರೂಪಿಸಿದರು.

LEAVE A REPLY

Please enter your comment!
Please enter your name here