Home ಧಾರ್ಮಿಕ ಸುದ್ದಿ ವಾರ್ಷಿಕ ನಡಾವಳಿ ಉತ್ಸವ ಸಂಪನ್ನ

ವಾರ್ಷಿಕ ನಡಾವಳಿ ಉತ್ಸವ ಸಂಪನ್ನ

1124
0
SHARE

ಮಹಾನಗರ: ಕೊಡಿಯಾಲ ಬೈಲ್‌ನ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರ ದಲ್ಲಿ ಶುಕ್ರವಾರದಿಂದ ಆರಂಭಗೊಂಡ ವಾರ್ಷಿಕ ನಡಾವಳಿ ಉತ್ಸವ ರವಿವಾರ ರಾತ್ರಿ ಸಮಾಪನಗೊಂಡಿತು.

ಸಾವಿರಾರು ಭಕ್ತರು ಈ ಪುಣ್ಯ ಕಾರ್ಯ ದಲ್ಲಿ ಭಾಗವಹಿಸಿ, ಶ್ರೀ ದೇವರ ಪ್ರಸಾದ ಸ್ವೀಕರಿಸಿದರು. ರವಿವಾರ ಮಧ್ಯಾಹ್ನ ಶ್ರೀ ಪುಲ್ಲೂರಾಳಿ ಭಗವತೀ ಕ್ಷೇತ್ರದಲ್ಲಿ ವಿಶೇಷ ಮಹಾಪೂಜೆ ನಡೆದು, ರಾತ್ರಿ ಕೆಂಡಸೇವೆ ನಡೆಯಿತು. ಆ ಬಳಿಕ ಮೂರ್ತಿದರ್ಶನ ನೆರವೇರಿತು. ಸಾವಿರಾರು ಭಕ್ತರು ಈ ಪುಣ್ಯಸಂದರ್ಭಕ್ಕೆ ಸಾಕ್ಷಿಯಾದರು.

“ಹಾಸ್ಯಲೋಕ’
ಇದೇ ವೇಳೆ ಸಾಂಸ್ಕೃತಿಕ ಕಾರ್ಯ ಕ್ರಮದ ಅಂಗವಾಗಿ ಚುಟುಕು ಸಾಹಿತ್ಯ ಪರಿಷತ್‌ ಮಂಗಳೂರು ಇದರ ವತಿ ಯಿಂದ ನಗೆ, ಚುಟುಕು, ಹರ ಟೆಯ “ಹಾಸ್ಯಲೋಕ’ ಕಾರ್ಯಕ್ರಮ ನಡೆಯಿತು.

ಕೆಂಡಸೇವೆ, ಬಲಿ ಉತ್ಸವ
ಶನಿವಾರ ರಾತ್ರಿ ಶ್ರೀ ಪಾಡಂಗರೆ ಭಗವತೀ ಕ್ಷೇತ್ರದಲ್ಲಿ ರಾತ್ರಿ ಭೇಟಿಕಳ, ವೀರಸ್ತಂಭ ದರ್ಶನ, ಮೇಲೇರಿಗೆ ಅಗ್ನಿಸ್ಪರ್ಶ, ರಾತ್ರಿ 2.30ಕ್ಕೆ ಶ್ರೀ ಭಗವತೀ ಮಾತೆಯರ ಭವ್ಯ ಶೋಭಾಯಾತ್ರೆ, ಮುಂಜಾನೆ 3.30ಕ್ಕೆ ಕೆಂಡಸೇವೆ, ಮೂರ್ತಿ ದರ್ಶನ ನೆರವೇರಿತು. ಶುಕ್ರ ವಾರ ರಾತ್ರಿ ಶ್ರೀ ಚೀರುಂಭ ಮಾತೆಯ ಸನ್ನಿಧಿಯಲ್ಲಿ ಬಲಿ ಉತ್ಸವ, ಮೂರ್ತಿ ದರ್ಶನ ಸಂಪನ್ನಗೊಂಡಿತ್ತು.
ಶ್ರೀ ಚೀರುಂಭ ಭಗವತೀ, ಶ್ರೀ ಪಾಡಂಗರ ಭಗವತೀ ಹಾಗೂ ಶ್ರೀ ಪುಲ್ಲೂರಾಳಿ ಭಗವತೀ ಮಾತೆಯರಿಗೆ ನೂತನವಾಗಿ ಅರ್ಪಿಸಲಾದ ಮೂರು ರಜತ ಪಲ್ಲಕ್ಕಿ ಗಳು ಈ ಬಾರಿಯ ನಡಾವಳಿಯಲ್ಲಿ ವಿಶೇಷವಾಗಿತ್ತು.

LEAVE A REPLY

Please enter your comment!
Please enter your name here