ನಾಗದರ್ಶನ ಕೋಟೆಕಾರು,: ಮಂಗಳೂರು ತಾಲೂಕಿನ ಕೋಟೆಕಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ಪಂಚಮಿಯಂದು (ಎ. 10ರಂದು) ವಾರ್ಷಿಕ ಮಹೋತ್ಸವ ಮತ್ತು ನಾಗದರ್ಶನ ಉತ್ಸವಾದಿಗಳು ಜರಗಲಿವೆ.
ಬೆಳಗ್ಗೆ 9ಕ್ಕೆ ಗಾಯತ್ರಿ ಕಲಶಾಭಿಷೇಕ, 10ಕ್ಕೆ ನಾಗದೇವರಿಗೆ ತಂಬಿಲ ಸೇವೆ, ಚೂರ್ಣೋತ್ಸವ, ತುಲಾಭಾರ ಸೇವೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ; ಸಂಜೆ 6ಕ್ಕೆ ಹೂವಿನ ಪೂಜೆ ಮತ್ತು 7ರಿಂದ ರಂಗ ಪೂಜೆ, ಬಲಿ ಉತ್ಸವ ಹಾಗೂ ನಾಗದರ್ಶನ ಉತ್ಸವ ನಡೆಯಲಿದೆ.
ರಾತ್ರಿ 11ರಿಂದ ತುಳುನಾಡು ಫ್ರೆಂಡ್ಸ್ ಕೋಟೆಕಾರ್ ವತಿಯಿಂದ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಅವರಿಂದ “ಬಂಜಿಗ್ ಹಾಕೊಡಿc’ ತುಳು
ನಾಟಕ ಪ್ರದರ್ಶನ ಜರಗಲಿದೆ. ಎ. 11ರಂದು ಪ್ರಾತಃ ಕಾಲ ಸಂಪ್ರೋಕ್ಷಣೆ – ಮಂತ್ರಾಕ್ಷತೆ ನಡೆಯಲಿದೆ ಎಂದು ಶ್ರೀ ವಿಷ್ಣುಮೂರ್ತಿ ಕ್ಷೇತ್ರ ಡೆವಲಪ್ಮೆಂಟ್ ಟ್ರಸ್ಟ್ನ ಪ್ರಕಟನೆ ತಿಳಿಸಿದೆ.