Home ಧಾರ್ಮಿಕ ಸುದ್ದಿ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ

ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ

3139
0
SHARE

‘ಭಗವಾನ್‌ ಶ್ರೀ ಕೃಷ್ಣನ ಶಬ್ದಸ್ವರೂಪಿ ಶರೀರವೇ ಭಾಗವತ’

ಮಹಾನಗರ:
ಶ್ರೀ ಮದ್ಭಾಗವತವು ಬದುಕಿನ ಗೊಂದಲಗಳ ನಿವಾರ ಣೆಯ ಮಾರ್ಗದರ್ಶಕ.ಭಗವಾನ್‌ ಶ್ರೀ ಕೃಷ್ಣನ ಶಬ್ದಸ್ವರೂಪಿ ಶರೀರವೇ ಭಾಗವತ ಎಂದು ಶ್ರೀ ದುರ್ಗಾಪರಮೇಶ್ವರೀ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ, ವಿದ್ವಾಂಸ ಡಾ| ಸೋಂದಾ ಭಾಸ್ಕರ ಭಟ್ ಹೇಳಿದರು.

ಶಕ್ತಿನಗರದಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವದ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಶ್ರೀ ಕೃಷ್ಣಾಯ ವಯಂ ನುಮಃ ಎಂಬ ವಿಷಯದಲ್ಲಿ ಶ್ರೀ ಮದ್ಭಾಗವತದ ಕುರಿತು ಪ್ರವಚನ ನೀಡಿದರು. ಸತ್ಯವೇ ಧರ್ಮದ ಬೆಳಕು, ಸತ್ಯ ಧರ್ಮದ ಬೆಳಕಿನ ಮೂಲಕ ಅಮೃತತ್ತ್ವದೆಡೆಗೆ ಕೊಂಡೊಯ್ಯುವ ಸಾಧನ ಪಂಚಭೂತಗಲ್ಲಿ ನೆಲೆಸಿರುವ ಭಗವಂತ ಎಂಬುದು ಶ್ರೀ ಮದ್ಭಾಗವತ ಸಂದೇಶ ಎಂದರು.

ನವೀಕೃತ ಜಾಲತಾಣ ಲೋಕಾರ್ಪಣ

ಅಧ್ಯಕ್ಷತೆ ವಹಿಸಿದ್ದ, ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್‌. ಶ್ರೀ ಕ್ಷೇತ್ರದ ನವೀಕೃತ ಜಾಲತಾಣವನ್ನು ಲೋಕಾರ್ಪಣ ಮಾಡಿದರು. ದೇಗುಲ ಗಳಲ್ಲಿ ಸಾನ್ನಿಧ್ಯವೃದ್ಧಿಗೆ ಭಕ್ತಿಮಾ ರ್ಗವು ಬಹಳಮುಖ್ಯ. ಧರ್ಮದ ಬಗ್ಗೆ, ದೇವರ ಮಹಿಮೆಯ ಬಗ್ಗೆ ತಿಳಿದು ಪ್ರಾಮಾಣಿಕವಾಗಿ ಜೀವನ ನಡೆಸಿದಾಗ ಮಾತ್ರ ಮಾನವ ಜನ್ಮ ಸಾರ್ಥಕವಾಗಲು ಸಾಧ್ಯ. ಇಂತಹ ಕಾರ್ಯಕ್ರಮಗಳನ್ನು ದೇವಸ್ಥಾನಗಳಲ್ಲಿ ನಡೆಸುವುದು ಸಮಾಜಕ್ಕೆ ನೀಡುವ ಅತಿ ದೊಡ್ಡ ಕೊಡುಗೆ. ಈ ನಿಟ್ಟಿನಲ್ಲಿ ಸಮಾಜಕ್ಕೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಕೊಡುಗೆ ಶ್ಲಾಘನೀಯ ಜಗದಗಲಕ್ಕೆ ಗೋಪಾಲಕೃಷ್ಣ ದೇವಸ್ಥಾನದ ಪರಿಚಯವಾಗಲು ಈ ಜಾಲತಾಣವು ಸಹಾಯಕವಾಗಲಿ ಎಂದರು.

ಆಡಳಿತ ಮೊಕ್ತೇಸರರಾದ ಕೆ.ಸಿ. ನಾೖಕ್‌ ಮಾತನಾಡಿ, ದೇವಸ್ಥಾನದ ಕೀರ್ತಿ ಇನ್ನಷ್ಟು ಹೆಚ್ಚಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿ ಶ್ರೀ ಗೋಪಾಲಕೃಷ್ಣನ ಅನುಗ್ರಹ ಪಡೆದುಕೊಳ್ಳುವಂತಾಗಬೇಕು ಎಂದರು. ಶಕ್ತಿ ವಿದ್ಯಾಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು.

ಗೌರವ ಸಲಹೆಗಾರ ಪ್ರೊ| ಎಂ. ಬಿ. ಪುರಾಣಿಕ್‌, ಡಾ| ಅನಂತ ಕೃಷ್ಣ ಭಟ್ ಶುಭ ಹಾರೈಸಿದರು. ಮೊಕ್ತೇಸರ ಸಂಜಿತ್‌ ನಾೖಕ್‌, ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಭಾಕರ ಜಿ.ಎಸ್‌., ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಕೃಷ್ಣಕುಮಾರ್‌ ಸ್ವಾಗತಿಸಿದರು. ಸತ್ಯನಾರಾ ಯಣ ಬಟ್ರಕೋಡಿ ನಿರೂಪಿಸಿದರು.

ಭಜನೋತ್ಸವದಲ್ಲಿ ವಿವಿಧ ಭಜನ ತಂಡಗಳಿಂದ ಭಜನ ಸಂಕೀರ್ತನೆ ಜರಗಿತು. ವಿವಿಧ ತಂಡಗಳಿಂದ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಯಕ್ಷಗಾನ ಬಯಲಾಟ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here